ಕಾಬೂಲ್: ರಾಜಧಾನಿಯ ದಕ್ಷಿಣ ಹೊರವಲಯದಲ್ಲಿರುವ ಅಫ್ಗಾನ್ ವಿಶೇಷ ಸೇನಾ ಪಡೆಯ ನೆಲೆಯ ಸಮೀಪ ಸಂಭವಿಸಿದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ.
ರಕ್ಷಣಾ ಸಚಿವ ಮತ್ತು ಅಫ್ಗಾನಿಸ್ತಾನದಲ್ಲಿರುವ ಅಮೆರಿಕ ಸೇನಾ ಪಡೆಯ ಕಮಾಂಡರ್ ಈ ಪ್ರದೇಶಕ್ಕೆ ಭೇಟಿ ನೀಡಿದ್ದ ಬೆನ್ನಲ್ಲೇ ದಾಳಿ ನಡೆದಿದೆ.ದಾಳಿಗೆ ತಾಲಿಬಾನ್ ಹೊಣೆ ಎಂದು ಸರ್ಕಾರ ಆರೋಪಿಸಿದೆ.
‘ಇದು ಮಾನವೀಯತೆಯ ವಿರುದ್ಧದ ಅಪರಾಧ.ಸೇನಾ ನೆಲೆ ಮೇಲೆ ದಾಳಿ ನಡೆಸುವುದು ಉಗ್ರರ ಗುರಿಯಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಮುಗ್ಧ ಜನರು ಪ್ರಾಣ ಕಳೆದುವಂತಾಯಿತು’ ಎಂದು ಗೃಹ ಇಲಾಖೆ ವಕ್ತಾರತಾರೆಕ್ ಅರಿಯನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.