ಇಸ್ಲಾಮಾಬಾದ್: ಅಫ್ಗನ್ ಸರ್ಕಾರ ಮತ್ತು ತಾಲಿಬಾನ್ ಸಂಘಟನೆ ನಡುವಣ ಶಾಂತಿ ಮಾತುಕತೆಯು ಒಂದು ತಿಂಗಳ ಬಳಿಕ ಪುನರರಾಂಭಗೊಂಡಿದೆ.
ಕತಾರ್‌ನಲ್ಲಿ ಶಾಂತಿ ಮಾತುಕತೆಯನ್ನು ಮುಂದುವರಿಸಲಾಗಿದ್ದು, ಈ ಬಗ್ಗೆ ತಾಲಿಬಾನ್ ವಕ್ತಾರ ಡಾ.ಮೊಹಮ್ಮದ್ ನಯೀಮ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
‘ತಾಲಿಬಾನ್ ಮತ್ತು ಅಫ್ಗನ್ ಸರ್ಕಾರದ ನಡುವೆ ಸೌಹಾರ್ದಯುತವಾಗಿ ಮಾತುಕತೆ ಪುನರಾರಂಭಗೊಂಡಿದೆ. ಈ ಮಾತುಕತೆ ಹೀಗೆಯೇ ಮುಂದುವರಿಯಬೇಕು. ಅಲ್ಲದೆ ಶಾಂತಿ ಮಾತುಕತೆಯ ಕಾರ್ಯಸೂಚಿಯನ್ನು ಮುಂಚಿತವಾಗಿ ನಿಗದಿ ಮಾಡಬೇಕು’ ಎಂದು ನಯೀಮ್ ಸೋಮವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.
‘ಈ ಶಾಂತಿ ಮಾತುಕತೆಯು ಜನವರಿಯಲ್ಲಿ ಏಕಾಏಕಿ ಸ್ಥಗಿತಗೊಂಡಿತ್ತು. ಇದೀಗ ಮಾತುಕತೆಯ ಆರಂಭದಲ್ಲೇ ಎರಡು ಬಣಗಳು ತಮ್ಮ ಇಚ್ಛೆಯ ಕಾರ್ಯಸೂಚಿಗಳನ್ನೊಳಗೊಂಡ ಪಟ್ಟಿಯನ್ನು ಸಲ್ಲಿಸಿವೆ. ಈ ಪಟ್ಟಿಗೆ ಅನುಗುಣವಾಗಿ ಉಭಯ ಬಣಗಳು ಚರ್ಚೆಯನ್ನು ಮುಂದುವರಿಸಲಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.