ಇಸ್ಲಾಮಾಬಾದ್: ಅಫ್ಗಾನಿಸ್ತಾನ ಮಹಿಳೆಯರು ಜೋರಾಗಿ ಪ್ರಾರ್ಥನೆ ಮಾಡುವುದು ಮತ್ತು ಇತರ ಮಹಿಳೆಯರ ಮುಂದೆ ಕುರಾನ್ ಪಠಣ ಮಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ತಾಲಿಬಾನ್‌ನ ಸಚಿವರೊಬ್ಬರು ಹೇಳಿದ್ದಾರೆ.
ಪೂರ್ವ ಲೋಗರ್ ಪ್ರಾಂತ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ಖಾಲಿದ್ ಹನಾಫಿ ಅವರು, ‘ವಯಸ್ಕ ಮಹಿಳೆಯು ಕುರಾನ್ ಪಠಿಸುವುದನ್ನು ನಿರ್ಬಂಧಿಸಲಾಗಿದೆ’ ಎಂದು ಹೇಳಿದ್ದಾರೆ.
‘ಅಲ್ಲಾಹು ಅಕ್ಬರ್’, ‘ಸುಭಾನುಲ್ಲಾಹ್' ಎಂದು ಹೇಳುವುದು ಕೂಡಾ ಅಪರಾಧ ಎಂದು ಸಚಿವ ಖಾಲಿದ್ ತಿಳಿಸಿದ್ದಾರೆ.
ಸಚಿವರ ಭಾಷಣದ ತುಣುಕುಗಳನ್ನು ಸಚಿವಾಲಯದ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಬಳಿಕ ಅಳಿಸಿ ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.