ಕಾಬೂಲ್: ಸುಮಾರು 500 ಜನರು ಅಫ್ಗಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ಪೊಲೀಸ್ ಪಡೆಗಳಿಗೆ ನಿಯೋಜನೆಗೊಂಡಿದ್ದಾರೆ. ಈ ಕುರಿತು ತಾಲಿಬಾನ್ ಸರ್ಕಾರ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಕಂದಹಾರ್ ಪೊಲೀಸ್ ತರಬೇತಿ ಕೇಂದ್ರದಿಂದ ಪದವಿ ಪಡೆದಿರುವ 500 ಜನರು ಒಂದು ತಿಂಗಳ ವೃತ್ತಿಪರ ತರಬೇತಿ ಪೂರ್ಣಗೊಳಿಸಿರುವುದಾಗಿ ವರದಿಯಾಗಿದೆ.
ಪೊಲೀಸ್ ತರಬೇತಿ ಪಡೆದಿರುವ ಅಭ್ಯರ್ಥಿಗಳು ನಿರ್ಗಮನ ಪಥ ಸಂಚಲನದಲ್ಲಿಭಾಗಿಯಾದರು. ಡ್ರಗ್ ದಂದೆ, ಅಪಹರಣ ಹಾಗೂ ಇತರೆ ಅಪರಾಧ ಕೃತ್ಯದ ವಿರುದ್ಧ ಹೋರಾಟ ನಡೆಸುವ ಸಾಮರ್ಥ್ಯವನ್ನು ಪ್ರದರ್ಶಿಸಿದರು.
ಮತ್ತೊಂದು ಕಡೆ ಅಫ್ಗಾನಿಸ್ತಾನದಲ್ಲಿ ವಿದ್ಯಾರ್ಥಿನಿಯರಿಗೆ ಶಾಲೆಗೆ ಮರಳಲು ಅವಕಾಶ ನೀಡುವಂತೆ ಪ್ರತಿಭಟನೆಗಳು ನಡೆಯುತ್ತಿವೆ.
ಆರನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಕಲಿಕೆಗೆ ಅವಕಾಶ ನೀಡಬೇಕು ಎಂಬ ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದಿದ್ದ ತಾಲಿಬಾನ್, ಹೊಸ ಶೈಕ್ಷಣಿಕ ವರ್ಷದಿಂದ ಅದನ್ನು ಪ್ರಾರಂಭಿಸುವುದಾಗಿ ಭರವಸೆ ನೀಡಿತ್ತು. ಆದರೆ ಮಂಗಳವಾರ ರಾತ್ರಿ ತನ್ನ ನಿರ್ಧಾರ ಬದಲಿಸಿದ್ದು, ಬುಧವಾರ ಹೊಸ ನಿರೀಕ್ಷೆಯೊಂದಿಗೆ ಶಾಲೆಗಳಿಗೆ ತೆರಳಿದ ವಿದ್ಯಾರ್ಥಿನಿಯರು ನಿರಾಸೆಗೊಂಡರು. ಶಾಲೆಗೆ ಬಂದ ಬಾಲಕಿಯರು ವಾಪಸ್ ಮನೆಗೆ ತೆರಳಬೇಕಾಯಿತು.
ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ತರಗತಿಗೆ ಮರಳಲು ಅವಕಾಶ ನೀಡುವ ನಿರ್ಧಾರವನ್ನು ಹಿಂತೆಗೆದುಕೊಂಡ ಬೆನ್ನಲ್ಲೇ ದೋಹಾದಲ್ಲಿ ತಾಲಿಬಾನ್‌ನೊಂದಿಗೆ ನಡೆಯಬೇಕಿದ್ದ ಸಭೆಗಳನ್ನು ಅಮೆರಿಕ ದಿಢೀರನೆ ರದ್ದುಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.