ADVERTISEMENT

ಭೂಮಿ ಮೇಲೆ ಪಕ್ಷಿ ಸಂಕುಲ ಉದಯ ಯಾವಾಗ ಆಯಿತು? ಸ್ವಾರಸ್ಯಕರ ಅಧ್ಯಯನ ವರದಿ ಪ್ರಕಟ

10 ವರ್ಷ ಅಧ್ಯಯನ ನಡೆಸಿರುವ ನೇಚರ್ ಟುಡೇ ಪತ್ರಿಕೆ ವರದಿ

ಪಿಟಿಐ
Published 2 ಏಪ್ರಿಲ್ 2024, 7:45 IST
Last Updated 2 ಏಪ್ರಿಲ್ 2024, 7:45 IST
<div class="paragraphs"><p>ಸ್ಟಾರ್ಕ್ ಹಕ್ಕಿಗಳು</p></div>

ಸ್ಟಾರ್ಕ್ ಹಕ್ಕಿಗಳು

   

ಪ್ರಜಾವಾಣಿ ಚಿತ್ರ

ಅಡಿಲೆಡ್, ಆಸ್ಟ್ರೇಲಿಯಾ: ಪಕ್ಷಿ ಸಂಕುಲದ ಉಗಮದ ಬಗ್ಗೆ ಸ್ವಾರಸ್ಯಕರ ವರದಿಯೊಂದು ‍ಪ್ರಕಟವಾಗಿದೆ.

ADVERTISEMENT

ಡೈನೋಸಾರ್‌‌ಗಳು ಅವನತಿಗೊಂಡ ಮೇಲೆ ಅಂದರೆ ಸುಮಾರು 50 ಲಕ್ಷ ವರ್ಷಗಳ ಹಿಂದೆ ಮೊಟ್ಟ ಮೊದಲ ಬಾರಿಗೆ ಭೂಮಿ ಮೇಲೆ ಪಕ್ಷಿ ಸಂಕುಲ ಉದಯವಾಯಿತು ಎಂದು ಆಸ್ಟ್ರೇಲಿಯಾದ ನೇಚರ್ ಟುಡೇ ಪತ್ರಿಕೆ ಅಧ್ಯಯನ ವರದಿ ಹೇಳಿದೆ.

10 ವರ್ಷ ಅಧ್ಯಯನ ನಡೆಸಿ ವರದಿ ನೀಡಲಾಗಿದ್ದು ಪಕ್ಷಿ ಸಂಕುಲದ ಉಗಮದ ಬಗ್ಗೆ ಅತ್ಯಂತ ದೊಡ್ಡ ವರದಿ ಇದು ಎಂದು ಹೇಳಲಾಗಿದೆ.

360 ಜಾತಿಯ ಪಕ್ಷಿಗಳನ್ನು (species) ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ಅಧ್ಯಯನ ಸದ್ಯ ಜೀವಿಸುತ್ತಿರುವ ಪಕ್ಷಿಗಳ ಜಾತಿಗಳ ನಡುವೆ ಮೂಲಭೂತ ಸಂಬಂಧ ಇದೆ ಎಂಬುದನ್ನು ಗುರುತಿಸಲಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.