ADVERTISEMENT

ಹ್ಯೂಸ್ಟನ್‌: ಬಹುನಿರೀಕ್ಷಿತ ‘ಹೌಡಿ ಮೋದಿ’ ಇಂದು

ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್‌ ಭಾಗಿ

ಪಿಟಿಐ
Published 21 ಸೆಪ್ಟೆಂಬರ್ 2019, 19:44 IST
Last Updated 21 ಸೆಪ್ಟೆಂಬರ್ 2019, 19:44 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಹ್ಯೂಸ್ಟನ್‌: ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿರುವ ಬಹುನಿರೀಕ್ಷಿತ ‘ಹೌಡಿ ಮೋದಿ!’ ಕಾರ್ಯಕ್ರಮ ಭಾನುವಾರ ನಡೆಯಲಿದೆ.

ಕಾರ್ಯಕ್ರಮದಲ್ಲಿ 50 ಸಾವಿರ ಭಾರತೀಯ ಅಮೆರಿಕನ್ನರು ಭಾಗವಹಿಸುವ ನಿರೀಕ್ಷೆಯಿದೆ.

ಪೋಪ್‌ ಹೊರತುಪಡಿಸಿ ವಿದೇಶದ ಯಾವುದೇ ಚುನಾಯಿತ ಪ್ರತಿನಿಧಿ ಭಾಗವಹಿಸಲಿರುವ ಸಭೆಯಲ್ಲಿ ಸೇರುತ್ತಿರುವ ಅತ್ಯಧಿಕ ಪ್ರೇಕ್ಷಕರ ಸಂಖ್ಯೆ ಇದಾಗಲಿದೆ. ಮೂರು ಗಂಟೆ ಅವಧಿಯ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರೂ ಪಾಲ್ಗೊಳ್ಳುವರು.

ADVERTISEMENT

ಹ್ಯೂಸ್ಟನ್‌ನ ಎನ್‌ಆರ್‌ಜಿ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ‘ಹೌಡಿ ಮೋದಿ’ ನಡೆಯಲಿದೆ. ‘ಹೌಡಿ ಮೋದಿ’ ಪೂರ್ವಭಾವಿಯಾಗಿ ಕಾರು ರ‍್ಯಾಲಿ ಆಯೋಜಿಸಲಾಗಿತ್ತು.

ಸೆಪ್ಟೆಂಬರ್‌ ಅಂತ್ಯಕ್ಕೆ ಕೆಲ ಒಪ್ಪಂದಗಳಿಗೆ ಸಹಿ ಸಾಧ್ಯತೆ
ವಾಷಿಂಗ್ಟನ್/ನವದೆಹಲಿ (ರಾಯಿಟರ್ಸ್‌): ನ್ಯೂಯಾರ್ಕ್‌ನಲ್ಲಿ ಸೆಪ್ಟೆಂಬರ್‌ ಅಂತ್ಯದಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಸಾಮಾನ್ಯಸಭೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕೆಲ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.

ವಾಣಿಜ್ಯ ಒಪ್ಪಂದ ಕುರಿತಂತೆ ಉಭಯ ರಾಷ್ಟ್ರಗಳ ನಡುವೆ ಚರ್ಚೆ ನಡೆದಿದೆ ಎಂದು ಮಾತುಕತೆಯನ್ನು ಹತ್ತಿರದಿಂದ ಬಲ್ಲ ಪ್ರಮುಖರು ತಿಳಿಸಿದ್ದಾರೆ.

ಚೀನಾದೊಂದಿಗಿನ ಸುದೀರ್ಘ ಕಾಲದ ವಾಣಿಜ್ಯ ಸ್ಪರ್ಧೆ ಕೊನೆಗಾಣಿಸುವಲ್ಲಿ ಟ್ರಂಪ್‌ ಸ್ವಲ್ಪಮಟ್ಟಿನ ಮುನ್ನಡೆ ಸಾಧಿಸಿದ್ದು, ಉಭಯ ರಾಷ್ಟ್ರಗಳ ನಡುವಿನ ಒಪ್ಪಂದ ಟ್ರಂಪ್‌ ದೃಷ್ಟಿಯಿಂದ ಸ್ವಾಗತಾರ್ಹ ಗೆಲುವು ಎಂದು ವ್ಯಾಖ್ಯಾನಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.