ವಾಷಿಂಗ್ಟನ್ (ಪಿಟಿಐ): 2024ರಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸಿದ್ಧತೆ ನಡೆಸಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 24 ಗಂಟೆಗಳಲ್ಲಿ 4 ಮಿಲಿಯನ್ ಡಾಲರ್ (₹32.87 ಕೋಟಿ) ನಿಧಿ ಸಂಗ್ರಹಿಸಿದ್ದಾರೆ.
ನೀಲಿಚಿತ್ರ ತಾರೆಗೆ ಹಣಸಂದಾಯ ಮಾಡಿದ ಪ್ರಕರಣದಲ್ಲಿ ಮ್ಯಾನ್ಹಟನ್‌ನ ಗ್ರ್ಯಾಂಡ್ ಜ್ಯೂರಿಯು ಟ್ರಂಪ್ ವಿರುದ್ಧ ದೋಷಾರೋಪ ಹೊರಿಸಿದ 24 ಗಂಟೆಗಳ ಅವಧಿಯಲ್ಲಿ ಈ ನಿಧಿ ಸಂಗ್ರಹವಾಗಿದೆ ಎಂದು ಟ್ರಂಪ್ ಕಚೇರಿಯ ಹೇಳಿಕೆ ತಿಳಿಸಿದೆ.
ಶೇ 25ರಷ್ಟು ದೇಣಿಗೆಯು ಇದೇ ಮೊದಲ ಬಾರಿಗೆ ದೇಣಿಗೆ ನೀಡುತ್ತಿರುವವರಿಂದ ಬಂದಿದೆ. ಈ ನೆರವು ಪಡೆಯುವ ವಿಷಯದಲ್ಲಿ ಟ್ರಂಪ್ ಮುಂಚೂಣಿಯಲ್ಲಿ ಇದ್ದಾರೆ ಎಂಬುದನ್ನು ದೃಢಪಡಿಸಿದೆ ಎಂದು ಹೇಳಿಕೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.