ಕೈರೊ: ಸುಡಾನ್‌ನ ರಾಜಧಾನಿಯಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಸಂಘರ್ಷ ಮುಂದುವರಿದಿದೆ. ಖಾರ್ಟೂಮ್‌ನಲ್ಲಿ ಮಾರುಕಟ್ಟೆಯೊಂದರ ಮೇಲೆ ಭಾನುವಾರ ಡ್ರೋನ್ ದಾಳಿ ನಡೆದಿದ್ದು, ಕನಿಷ್ಠ 43 ಜನರು ಮೃತಪಟ್ಟಿದ್ದಾರೆ.
ಅಲ್ಲದೆ, 55ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.
ದೇಶದ ಮೇಲೆ ಹಿಡಿತಕ್ಕೆ ಸೇನೆ ಮುಖ್ಯಸ್ಥ ಜನರಲ್ ಅಬ್ದೆಲ್ ಫಟ್ಟ್ಹಾಬುರ‍್ಹಾನ್, ಅರೆಸೇನಾ ಪಡೆಯ ಮುಖ್ಯಸ್ಥ ಜನರಲ್ ಮೊಹಮ್ಮದ್ ಹಮ್ದನ್ ಡಗಲೊ ಅವರು ಸಂಘರ್ಷ ನಡೆಸಿದ್ದಾರೆ. ಪರಿಣಾಮ ಈ ವರ್ಷದ ಏಪ್ರಿಲ್ ಮಧ್ಯಭಾಗದಿಂದಲೂ ಬಿಗುವಿನ ಸ್ಥಿತಿ ಇದೆ. ಹಲವೆಡೆ ಹೆಚ್ಚಿನ ಪಡೆಗಳನ್ನು ಭದ್ರತೆಗೆ ನಿಯೊಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.