ನೊಮೆ (ಅಮೆರಿಕ): ಪಶ್ಚಿಮ ಅಲಾಸ್ಕಾದ ಕಡಲ ತೀರದಲ್ಲಿ ರಷ್ಯಾ ಮತ್ತು ಅಮೆರಿಕ ನಡುವಿನ ಶೀತಲ ಸಮರ ಕಾಲದ ರಷ್ಯಾ ನೌಕಾಪಡೆಗೆ ಸೇರಿದ 50 ವರ್ಷ ಹಿಂದಿನ ಪತ್ರ ವೊಂದು ಬಾಟಲಿಯೊಂದರಲ್ಲಿ ಸಿಕ್ಕಿದೆ.
ಕಟ್ಟಿಗೆ ಒಟ್ಟುಗೂಡಿಸುವ ಸಂದರ್ಭದಲ್ಲಿ ಟೈಲರ್ ಐವನೋಫ್ ಎಂಬುವವರಿಗೆ ಈ ಪತ್ರವು ದೊರೆತಿದೆ ಎಂದು ಆಕಾಶವಾಣಿ ಕೇಂದ್ರವೊಂದು ಮಂಗಳವಾರ ವರದಿ ಪ್ರಸಾರ ಮಾಡಿದೆ.
‘ಕಟ್ಟಿಗೆ ಒಗ್ಗೂಡಿಸುವಾಗ ಬಾಟಲಿ ಯೊಂದು ಕಾಲಿಗೆ ಸಿಕ್ಕಿ ಎಡವಿದೆ. ಬಾಟಲಿಯು ಹಸಿರು ಬಣ್ಣದ್ದಾಗಿತ್ತು. ಅದರ ಮುಚ್ಚಳವನ್ನು ಮರದಿಂದ ಮಾಡಲಾಗಿತ್ತು ಮತ್ತು ಮುಚ್ಚಳ ಗಟ್ಟಿಯಾಗಿತ್ತು. ಬಾಟಲಿಯೊಳಗೆ ಪತ್ರವೊಂದು ಇರುವಂತೆ ತೋರಿತು’ ಎಂದು ಟೈಲರ್ ಐವನೋಫ್ ವಿವರಿಸಿ ದರು.
’ಈ ಪತ್ರವನ್ನು ಟೈಲರ್ ಅವರು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದರು. ಇದನ್ನು ಓದಿದ ರಷ್ಯಾ ಭಾಷಿಕರು, ಇದು 1969ರಲ್ಲಿ ಶೀತಲ ಸಮರ ಕಾಲದ ರಷ್ಯಾದ ನಾವಿಕರೊಬ್ಬರು ಬರೆದ ಪತ್ರ ಎಂಬುದಾಗಿ ಪತ್ರವನ್ನು ಅನುವಾದಿಸಿದರು’ ಎಂದು ಅಧಿಕಾರಿ ಗಳು ಹೇಳಿದರು. ರಷ್ಯನ್ ಮೀಡಿಯಾ ನೆಟ್‌ವರ್ಕ್‌ನ ವರದಿಗಾರರು ಪತ್ರ ಬರೆದ ನಾವಿಕನನ್ನು ಪತ್ತೆ ಹಚ್ಚಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.