ಈಜಿಪ್ಟ್‌ನ ಸುಯೆಜ್ ಕಾಲುವೆಯಲ್ಲಿ ಸಿಲುಕಿರುವ ಅತಿದೊಡ್ಡ ಸರಕು ಸಾಗಣೆ ಹಡಗು ಎವರ್ ಗಿವನ್‌ನಲ್ಲಿರುವ ಎಲ್ಲ 25 ಸಿಬ್ಬಂದಿ ಭಾರತೀಯರು ಎಂದು ತಿಳಿದುಬಂದಿದೆ.
ಕಾಲುವೆಯಲ್ಲಿ ಸಿಲುಕಿರುವ ಹಡಗನ್ನು ಸರಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಯತ್ನಿಸಲಾಗುತ್ತಿದೆ, ಹಡಗಿನಲ್ಲಿರುವ ಎಲ್ಲ ಸಿಬ್ಬಂದಿ ಸುರಕ್ಷಿತರಾಗಿದ್ದು, ಅವರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಜಪಾನ್ ಮೂಲದ ಎವರ್ ಗಿವನ್ ಹಡಗಿನ ಮಾಲೀಕರು ಹೇಳಿದ್ದಾರೆ.
ಪ್ರಾಥಮಿಕ ವರದಿ ಪ್ರಕಾರ, ಹಡಗು ಬಲವಾದ ಗಾಳಿಗೆ ಸಿಲುಕಿ ಬದಿಗೆ ವಾಲಿದೆ. ಅದಕ್ಕೆ ತಾಂತ್ರಿಕ ದೋಷ ಕಾರಣವಲ್ಲ ಎಂದು ಹಡಗಿನ ಮ್ಯಾನೇಜರ್ ತಿಳಿಸಿದ್ದಾರೆ.
ಸುಯೆಜ್ ಕಾಲುವೆಯಲ್ಲಿ ಹಡಗು ಸಿಲುಕಿರುವುದರಿಂದ ತೈಲ ಮತ್ತು ವಿವಿಧ ಸರಕು ಕಂಟೇನರ್ ಹೊತ್ತ ಹಡಗುಗಳು ಸಂಚಾರಕ್ಕೆ ಅಡಚಣೆಯಾಗಿ ಕಾದುನಿಂತಿವೆ.
ಸುಯೆಜ್ ಕಾಲುವೆಯಲ್ಲಿ ಸಿಲುಕಿರುವ ಹಡಗನ್ನು ಸುಸ್ಥಿತಿಗೆ ತರಲು ಎಂಟು ದೊಡ್ಡ ಟಗ್‌ಬೋಟ್‌ಗಳು ಯತ್ನಿಸುತ್ತಿವೆ. ಹಡಗು ಸುಮಾರು 1,300 ಅಡಿ ಉದ್ದ ಮತ್ತು 2,00,000 ಮೆಟ್ರಿಕ್ ಟನ್ ಭಾರ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.