ADVERTISEMENT

Chandrayaan-3 | ಭಾರತದ ಪಾಲುದಾರರಾಗಿದ್ದಕ್ಕೆ ಹೆಮ್ಮೆಯಿದೆ: ಕಮಲಾ ಹ್ಯಾರಿಸ್‌

ಪಿಟಿಐ
Published 24 ಆಗಸ್ಟ್ 2023, 3:02 IST
Last Updated 24 ಆಗಸ್ಟ್ 2023, 3:02 IST
ಕಮಲಾ ಹ್ಯಾರಿಸ್‌
ಕಮಲಾ ಹ್ಯಾರಿಸ್‌   

ವಾಷಿಂಗ್ಟನ್‌/ದಕ್ಷಿಣ ಆಫ್ರಿಕಾ: ಚಂದ್ರನ ದಕ್ಷಿಣ ದ್ರುವಕ್ಕೆ ಕಾಲಿಟ್ಟು ಭಾರತ ಚಂದ್ರಯಾನ–3ರಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ದೇಶ ವಿದೇಶಗಳಿಂದ ಭಾರತದ ಯಶಸ್ವಿಗೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ. 

ಈ ಮಿಷನ್ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಪಾಲುದಾರರಾಗಲು ನಾವು ಹೆಮ್ಮೆಪಡುತ್ತೇವೆ. ಈ ಸಾಧನೆಯಲ್ಲಿ ಒಳಗೊಂಡಿರುವ ಎಲ್ಲಾ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಇದು ನಂಬಲಾಗದ ಸಾಧನೆಯಾಗಿದೆ ಎಂದು ಭಾರತ ಮೂಲದ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಹೇಳಿದ್ದಾರೆ.

ಇದನ್ನೂ ಓದಿ: Chandrayaan-3: ಲ್ಯಾಂಡ್ ಆದ ಬಳಿಕ ತೆಗೆದ ಚಿತ್ರಗಳನ್ನು ಹಂಚಿಕೊಂಡ ಇಸ್ರೊ

ADVERTISEMENT

ರವೀಂದ್ರನಾಥ್‌ ಟ್ಯಾಗೋರ್‌ ಅವರ ಸಾಲು ಉಲ್ಲೇಖಿಸಿದ ದಕ್ಷಿಣ ಆಫ್ರಿಕಾ ಅಧ್ಯಕ್ಷ

ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಫೋಸಾ ಅವರು ನೋಬೆಲ್‌ ಪುರಸ್ಕೃತ ಬರಹಗಾರ ರವೀಂದ್ರನಾಥ್‌ ಟ್ಯಾಗೋರ್‌ ಅವರು ಹೇಳಿದ ‘ಜೀವನದ ಪಯಣ ಅಂತ್ಯವಿಲ್ಲದಿದ್ದರೆ ಅದರ ಗುರಿ ಎಲ್ಲಿದೆ? ಎಂದರೆ ನಾವು ಅಂತ್ಯವಿಲ್ಲದ ಅರಮನೆಯಲ್ಲಿದ್ದೇವೆ, ಆದರೆ ನಾವು ತಲುಪಿದ್ದೇವೆ. ಇನ್ನು  ಅನ್ವೇಷಿಸುವ ಮೂಲಕ ಮತ್ತು ಅದರೊಂದಿಗೆ ನಮ್ಮ ಸಂಬಂಧವನ್ನು ವಿಸ್ತರಿಸುವ ಮೂಲಕ, ಅದನ್ನು ಹೆಚ್ಚು ಹೆಚ್ಚು ನಮ್ಮದಾಗಿಸಿಕೊಳ್ಳುತ್ತೇವೆ’ ಎನ್ನುವ ಸಾಲನ್ನು ಉಲ್ಲೇಖಿಸಿ ಭಾರತಕ್ಕೆ ಅಭಿನಂದಿಸಿದ್ದಾರೆ.

ಈ ರೀತಿಯ ಅನೇಕ ಸಾಧನೆಗಳು ಸಮೃದ್ಧಿ, ಪ್ರಗತಿ ಮತ್ತು ಶಾಂತಿಯತ್ತ ಮುನ್ನಡೆಯಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.

ಬ್ರಿಕ್ಸ್‌ ಶೃಂಗಸಭೆಯು ಭಾರತದ ಈ ಯಶಸ್ಸನ್ನು ಸಾಧಿಸಲು ಮತ್ತೊಂದು ವೇದಿಕೆಯಾದಂತಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Chandrayaan 3 | ಅಮೆರಿಕನ್ ಭಾರತೀಯರಲ್ಲೂ ಮನೆ ಮಾಡಿದ ಸಂಭ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.