ವಾಷಿಂಗ್ಟನ್: ಅಮೆರಿಕವನ್ನು ತೀವ್ರವಾಗಿ ಭಾದಿಸುತ್ತಿರುವ ಕೊರೊನಾ ವೈರಸ್, ಅಲ್ಲಿ ಮತ್ತೊಂದು ಬಗೆಯ ಸಮಸ್ಯೆಯನ್ನೂ ತಂದಿಟ್ಟಿದೆ. ಉದ್ಯೋಗ ಸಮಸ್ಯೆ ತಮ್ಮನ್ನು ಭಾದಿಸುತ್ತಿರುವುದಾಗಿ ಅಲ್ಲಿನ ಜನ ಹೇಳಿದ್ದಾರೆ.
ಕೊರೊನಾ ವೈರಸ್‌ನಿಂದ ಎದುರಾದ ಪರಿಣಾಮಗಳಿಂದಾಗಿ ಅಲ್ಲಿನ ಜನಸಂಖ್ಯೆಯ ಕಾಲುಭಾಗದಷ್ಟು ಜನ ಉದ್ಯೋಗ ನಷ್ಟ ಅಥವಾ ಸಂಬಳ ಕಡಿತದಂಥ ಸಮಸ್ಯೆಗೆ ಸಿಲುಕಿದ್ದಾರೆ ಎಂದು 'ಸಿಎನ್‌ಬಿಸಿ ಆಲ್ ಆಮೆರಿಕ ಎಕನಾಮಿಕ್ ಸರ್ವೆ' ನಡೆಸಿದ ಅಧ್ಯಯನದಲ್ಲಿ ಬಯಲಾಗಿದೆ.
ಇದೇ ವೇಳೆ ಮುಂದಿನ ವರ್ಷ ದೇಶದ ಪರಿಸ್ಥಿತಿ ಸುಧಾರಿಸಲಿದೆ ಎಂಬ ಆಶಾವಾದವೂ ಜನರಲ್ಲಿದೆ.
ಕಳೆದ ಶುಕ್ರವಾರದಿಂದ ಸೋಮವಾರದ ವರೆಗೆ ಈ ಅಧ್ಯಯನ ನಡೆದಿದ್ದು, ಒಟ್ಟು 800 ಮಂದಿಯನ್ನು ಒಳಗೊಂಡಿದೆ. ಇದರಲ್ಲಿ %10ರಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡಿರುವಾಗಿಯೂ, 16% ಮಂದಿ ಸಂಬಳ ಕಡಿತವಾಗಿರುವುದಾಗಿಯೂ, ಕೊರೊನಾ ವೈರಸ್‌ನಿಂದ ಎದುರಾದ ಆರ್ಥಿಕ ಹಿಂಜರಿತದ ಪರಿಣಾಮಗಳಿವು ಎಂದು ಹೇಳಿರುವುದಾಗಿಯೂ ಅಧ್ಯಯನ ತಿಳಿಸಿದೆ.
ಇನ್ನು 9% ಮಂದಿ ತಾವು ಕೆಲಸ ಕಳೆದುಕೊಳ್ಳುವ ಆಥವಾ ಸಂಬಳ ಕಡಿತವಾಗುವ ಸಾಧ್ಯತೆಗಳಿವೆ ಎಂದೂ ಹೇಳಿದ್ದಾರೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಗಿದೆ.
ಅಮೆರಿಕದ ಅರ್ಥಿಕತೆ ಚನ್ನಾಗಿದೆ ಎಂಬ ಅಭಿಪ್ರಾಯವು 22%ಗೆ ಕುಸಿದಿರುವುದು ಅಧ್ಯಯನದಿಂದ ಕಂಡು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.