ಕಠ್ಮಂಡು (ಪಿಟಿಐ): ಸಿಖ್ ಮೂಲಭೂತವಾದಿ ಧರ್ಮಪ್ರಚಾರಕ ಅಮೃತಪಾಲ್ ಸಿಂಗ್ ನೇಪಾಳದಲ್ಲಿ ತಲೆಮರೆಸಿಕೊಂಡಿರುವ ಶಂಕೆ ಇದ್ದು, ಆತನ ಪತ್ತೆಗೆ ಸಹಕರಿಸಬೇಕು ಎಂದು ಭಾರತ ಸರ್ಕಾರ ಕೋರಿದೆ.
ಭಾರತದ ಪಾಸ್‌ಪೋರ್ಟ್ ಅಥವಾ ನಕಲಿ ಪಾಸ್‌ಪೋರ್ಟ್ ಬಳಸಿ ಆತ ಯಾವುದಾದರೂ ರಾಷ್ಟ್ರಕ್ಕೆ ಪಲಾಯನಗೊಳ್ಳುವ ಸಾಧ್ಯತೆ ಇದೆ. ಆತ ನೇಪಾಳದಲ್ಲಿ ಕಂಡುಬಂದರೆ ಬಂಧಿಸಬೇಕು ಹಾಗೂ ಮಾಹಿತಿ ನೀಡಬೇಕು ಎಂದು ಕಾನ್ಸುಲರ್ ಸೇವಾ ಸಚಿವಾಲಯವು ನೇಪಾಳ ಸರ್ಕಾರಕ್ಕೆ ಪತ್ರ ಬರೆದಿದೆ.
ಸಿಂಗ್ ಸದ್ಯ ನೇಪಾಳದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಸ್ಥಳೀಯ ನಿಯತಕಾಲಿಕೆ ‘ಕಾಠ್ಮಂಡು ಪೋಸ್ಟ್‘ ವರದಿಯನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಮೃತಪಾಲ್ ಸಿಂಗ್‌ನ ವ್ಯಕ್ತಿಗತ ವಿವರ ಹಾಗೂ ಭಾರತದ ಪತ್ರವನ್ನು ಹೋಟೆಲ್‌ಗಳು, ವಿಮಾನಯಾನ ಸಂಸ್ಥೆಗಳಿಗೆ ರವಾನಿಸಲಾಗಿದೆ. ಸಿಂಗ್ ಭಿನ್ನ ಹೆಸರಿನಲ್ಲಿ ಹಲವು ರಾಷ್ಟ್ರಗಳ ಪಾಸ್‌ಪೋರ್ಟ್ ಹೊಂದಿರುವ ಸಾಧ್ಯತೆಗಳು ಇವೆ ಎಂದು ಹೇಳಲಾಗಿದೆ. ಸಿಂಗ್ ಮಾರ್ಚ್ 18ರಿಂದ ತಲೆಮರೆಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.