ADVERTISEMENT

ಸಿರಿಯಾ: ವೈಮಾನಿಕ ದಾಳಿಗೆ 9 ಸಾವು

ಪಿಟಿಐ
Published 18 ಜನವರಿ 2024, 14:07 IST
Last Updated 18 ಜನವರಿ 2024, 14:07 IST
ಸಿರಿಯಾ ಮೇಲಿನ ವೈಮಾನಿಕ ದಾಳಿಯ ಪ್ರಾತಿನಿಧಿಕ ಚಿತ್ರ
ಎಎಫ್‌ಪಿ ಚಿತ್ರ
ಸಿರಿಯಾ ಮೇಲಿನ ವೈಮಾನಿಕ ದಾಳಿಯ ಪ್ರಾತಿನಿಧಿಕ ಚಿತ್ರ ಎಎಫ್‌ಪಿ ಚಿತ್ರ    

ಬೈರೂತ್ : ದಕ್ಷಿಣ ಸಿರಿಯಾ ಮೇಲೆ ಗುರುವಾರ ನಡೆದ ವೈಮಾನಿಕ ದಾಳಿಯಲ್ಲಿ ಕನಿಷ್ಠ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ. ಮಾದಕ ವಸ್ತು ಕಳ್ಳ ಸಾಗಣೆದಾರರು ಸಕ್ರಿಯರಾಗಿರುವ, ಸರಣಿ ದಾಳಿಗಳು ನಡೆದ ಗಡಿ ಭಾಗದಲ್ಲಿಯೇ ಮತ್ತೆ ದಾಳಿ ನಡೆದಿದ್ದು, ಜೋರ್ಡಾನ್ ವಾಯುಪಡೆಯೇ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಸಿರಿಯಾದ ವಿರೋಧ ಪಕ್ಷಗಳ ಕಾರ್ಯಕರ್ತರು ಹೇಳಿದ್ದಾರೆ. ಆದರೆ, ಸ್ವೈದಾ ಎಂಬ ಪ್ರಾಂತ್ಯದಲ್ಲಿ ನಡೆದ ಈ ದಾಳಿಯ ಹೊಣೆಯನ್ನು ಜೋರ್ಡಾನ್ ಇನ್ನೂ ಹೊತ್ತಿಲ್ಲ.  

ಓರ್ಮನ್ ಎನ್ನುವ ಹಳ್ಳಿಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಇಬ್ಬರು ಮಕ್ಕಳು, ಮೂವರು ಮಹಿಳೆಯರು ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಸತ್ತಿದ್ದಾರೆ ಎಂದು ಬ್ರಿಟನ್ ಮೂಲದ ಮಾನವ ಹಕ್ಕು ಕಣ್ಗಾವಲು ಸಂಸ್ಥೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT