ಬೀಜಿಂಗ್: ತೈವಾನ್ ಅಧ್ಯಕ್ಷೆ ಸಾಯ್ ಇಂಗ್ ವೆನ್ ಅವರು ಅಮೆರಿಕ ಸಂಸತ್ ಸ್ಪೀಕರ್ ಕೆವಿನ್ ಮೆಕಾರ್ಥಿ ಅವರೊಂದಿಗೆ ಸಭೆ ನಡೆಸಿದ್ದಕ್ಕೆ ಪ್ರತೀಕಾರವಾಗಿ ಅಮೆರಿಕದ ರೊನಾಲ್ಡ್ ರೇಗನ್ ಪ್ರೆಸಿಡೆನ್ಶಿಯಲ್ ಲೈಬ್ರರಿ ಹಾಗೂ ಏಷ್ಯಾ ಮೂಲದ ಹಲವು ಸಂಸ್ಥೆಗಳಿಗೆ ಚೀನಾ ಶುಕ್ರವಾರ ನಿರ್ಬಂಧ ಹೇರಿದೆ.
ಸಾಯ್ ಇಂಗ್ ವೆನ್ ಅವರು ಸಿಮಿ ವ್ಯಾಲಿಯಲ್ಲಿರುವ ‘ದಿ ರೊನಾಲ್ಡ್ ರೇಗನ್ ಪ್ರೆಸಿಡೆನ್ಶಿಯಲ್ ಲೈಬ್ರರಿ’ಯಲ್ಲಿ ಕೆವಿನ್ ಮೆಕಾರ್ಥಿ ಅವರನ್ನು ಭೇಟಿ ಮಾಡಿದ್ದರು. ಮಾ.30ರಂದು ಕಾರ್ಯಕ್ರಮ ಆಯೋಜಿಸಿದ್ದ ಹಡ್ಸನ್ ಇನ್‌ಸ್ಟಿಟ್ಯೂಟ್ ಅನ್ನೂ ಚೀನಾ ನಿಷೇಧಿಸಿದೆ.
ಸಭೆ ನಡೆದರೆ ದಿಟ್ಟ ಪ್ರತ್ಯುತ್ತರ ನೀಡುವುದಾಗಿ ಚೀನಾ ಪದೇ ಪದೇ ಎಚ್ಚರಿಕೆ ನೀಡಿದ ಹೊರತಾಗಿಯೂ ಗುರುವಾರ ಸಭೆ ನಡೆದಿತ್ತು.
ತೈವಾನ್ ಮತ್ತು ಯಾವುದೇ ವಿದೇಶಿ ಸರ್ಕಾರಗಳ ನಡುವೆ ನಡೆಯುವ ಮಾತುಕತೆಯು ಸಾರ್ವಭೌಮತ್ವದ ಉಲ್ಲಂಘನೆ ಎಂದು ಚೀನಾ ಪರಿಗಣಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.