ವಾಷಿಂಗ್ಟನ್: ಚೀನಾದ ಮತ್ತೊಂದು ಕಣ್ಗಾವಲು ಬಲೂನ್ ಲ್ಯಾಟಿನ್ ಅಮೆರಿಕವನ್ನು ಹಾದು ಹೋಗುತ್ತಿದೆ ಎಂದು ಪೆಂಟಗನ್ ಶುಕ್ರವಾರ ರಾತ್ರಿ ಹೇಳಿದೆ.
‘ಬಲೂನ್‌ವೊಂದು ಲ್ಯಾಟಿನ್ ಅಮೆರಿಕವನ್ನು ಹಾದು ಹೋಗುತ್ತಿರುವ ವರದಿಗಳನ್ನು ಕೇಳುತ್ತಿದ್ದೇವೆ. ಇದು ಮತ್ತೊಂದು ಚೀನೀ ಕಣ್ಗಾವಲು ಬಲೂನ್ ಎಂಬ ನಿರ್ಣಯಕ್ಕೆ ನಾವು ಬಂದಿದ್ದೇವೆ. ಈ ಬಗ್ಗೆ ಸದ್ಯ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ’ ಎಂದು ಪೆಂಟಗನ್ ಮಾಧ್ಯಮ ಕಾರ್ಯದರ್ಶಿಪ್ಯಾಟ್ ರೈಡರ್ ಹೇಳಿದರು.
ಅಮೆರಿಕದ ಮೊಂಟಾನಾದಲ್ಲಿ ಚೀನಾದ ಕಣ್ಗಾವಲು ಬಲೂನ್ ಹಾರುತ್ತಿರುವುದನ್ನು ಕಂಡುಹಿಡಿದ ಒಂದು ದಿನದ ಬಳಿಕ ಪೆಂಟಗನ್, ಚೀನಾದ ಮತ್ತೊಂದು ಕಣ್ಗಾವಲು ಬಲೂನ್ ಲ್ಯಾಟಿನ್ ಅಮೆರಿಕದಲ್ಲಿ ಹಾದು ಹೋಗುತ್ತಿರುವುದನ್ನು ಪತ್ತೆ ಹಚ್ಚಿದೆ.
ಈ ಸಂಬಂಧ ಚೀನಾ ವಿರುದ್ಧದ ಪ್ರತಿಭಟನಾರ್ಥವಾಗಿ ವಿದೇಶಾಂಗ ಕಾರ್ಯದರ್ಶಿ ಟೋನಿ ಬ್ಲಿಂಕೆನ್ ಅವರ ಚೀನಾ ಪ್ರವಾಸವನ್ನು ರದ್ದುಪಡಿಸಲಾಗಿದೆ.
ಈ ಹೊಸ ಬಲೂನ್ ಯಾವ ದೇಶದ ಮೇಲೆ ಹಾರುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಅದು ಅಮೆರಿಕದ ಕಡೆ ಹೋಗುತ್ತಿದಂತೆ ಕಾಣುತ್ತಿಲ್ಲ ಎಂದು ಸಿಎನ್‌ಎನ್ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.