ವಿಶ್ವಸಂಸ್ಥೆ: ‘ಉಕ್ರೇನ್ ಬಿಕ್ಕಟ್ಟು ಕುರಿತು ಜಿ–20 ಗುಂಪಿನ ವಿದೇಶಾಂಗ ಸಚಿವರ ಸಭೆಯು ಜಂಟಿ ಘೋಷಣೆ ಹೊರಡಿಸದಿರುವುದು ಅಂತರರಾಷ್ಟ್ರೀಯ ಸಮುದಾಯದಲ್ಲಿರುವ ಒಡಕುಗಳನ್ನು ತೋರಿಸುತ್ತದೆ’ ಎಂದು ವಿಶ್ವಸಂಸ್ಥೆ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರ ವಕ್ತಾರ ಸ್ಟೀಫನ್ ದುಜಾರಿಕ್, ‘ಈ ವಿಷಯದಲ್ಲಿ ನಾವು ಯಾರನ್ನೂ ದೂಷಿಸುತ್ತಿಲ್ಲ. ಯಾವ ವಿಶ್ಲೇಷಣೆಯನ್ನೂ ಮಾಡುತ್ತಿಲ್ಲ’ ಎಂದರು.
‘ಆತಿಥೇಯ ರಾಷ್ಟ್ರ ಭಾರತ ಹಾಗೂ ಅದರ ಪ್ರಯತ್ನಗಳತ್ತ ನಾವು ಬೊಟ್ಟು ಮಾಡುತ್ತಿಲ್ಲ’ ಎಂದೂ ಹೇಳಿದರು.
‘ಜಂಟಿ ಘೋಷಣೆ’ ಹೊರಬೀಳದ್ದಕ್ಕೆ ರಷ್ಯಾ ಹಾಗೂ ಚೀನಾ ವಿರುದ್ಧ ಅಮೆರಿಕ ಕಿಡಿಕಾರಿತ್ತು. ಈ ಕುರಿತ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.