ADVERTISEMENT

ಪಾಕ್: ಮಾಜಿ ಸಚಿವ ಖುರೇಷಿ ವಿರುದ್ಧ ದೋಷಾರೋಪ

ಪಿಟಿಐ
Published 15 ಜುಲೈ 2024, 14:51 IST
Last Updated 15 ಜುಲೈ 2024, 14:51 IST
ಶಾ ಮೊಹಮ್ಮದ್ ಖುರೇಷಿ
ಶಾ ಮೊಹಮ್ಮದ್ ಖುರೇಷಿ   

ಲಾಹೋರ್: ಕಳೆದ ವರ್ಷದ ಮೇ 9ರಂದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮಾಜಿ ವಿದೇಶಾಂಗ  ಮಾಜಿ ಸಚಿವ ಹಾಗೂ ಪಾಕಿಸ್ತಾನ ತೆಹ್ರೀಕ್–ಇ–ಇನ್ಸಾಫ್ (ಪಿಟಿಐ) ಪಕ್ಷದ ಹಿರಿಯ ಮುಖಂಡ ಶಾ ಮೊಹಮ್ಮದ್ ಖುರೇಷಿ ವಿರುದ್ಧ ಇಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ದೋಷಾರೋಪ ಹೊರಿಸಿದೆ.

ದೇಶದ್ರೋಹ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಮೇರೆಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷವನ್ನು ನಿಷೇಧಿಸುವುದಾಗಿ ಪಾಕಿಸ್ತಾನ ಸರ್ಕಾರ ಘೋಷಣೆ ಮಾಡಿದ ಬೆನ್ನಲ್ಲೇ, ಅವರ ಪಕ್ಷದ ಮುಖಂಡ ಖುರೇಷಿ ವಿರುದ್ಧ ನ್ಯಾಯಾಲಯವು ಈ ಆರೋಪ ಹೊರಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT