ಕೈರೊ: ಮೃತದೇಹಗಳನ್ನು ಸಂರಕ್ಷಿಸಿಡುವ (ಮಮ್ಮೀಕರಣ) ಕಾರ್ಯಾಗಾರವನ್ನು ಪತ್ತೆಹಚ್ಚಿರುವುದಾಗಿ ಪುರಾತತ್ವ ಶಾಸ್ತ್ರಜ್ಞರು ಹೇಳಿದ್ದಾರೆ. ವಿವಿಧ ಸಮುದಾಯಗಳ ಸಮಾಧಿ ಸ್ಥಳವನ್ನೂ ಇದೇ ಜಾಗದಲ್ಲಿ ಶೋಧಿಸಲಾಗಿದೆ.
ಪ್ರಾಚೀನ ಈಜಿಪ್ಟ್‌ನ 26ನೇ ರಾಜವಂಶದ ಅವಧಿಯಲ್ಲಿ ನಿರ್ಮಾಣವಾದ ಈ ಸ್ಥಳದಲ್ಲಿ ಮೃತದೇಹ ಸಂರಕ್ಷಣೆಯ ಇನ್ನಷ್ಟು ಮಾಹಿತಿಗಳು ಸಿಗಲಿವೆ ಎಂದು ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಕ್ರಿ.ಪೂ 664–404 ಅವಧಿಗೆ ಸೇರಿದ ಇವು, ಯುನೆಸ್ಕೊದ ವಿಶ್ವ ಪಾರಂಪರಿಕಾ ತಾಣ ಮೆಂಫಿಸ್ ನೆಕ್ರೊಪೊಲೀಸ್‌ನ ಸಕ್ಕಾರಾ ಸ್ಮಶಾನದಲ್ಲಿ ಪತ್ತೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.