ಬೆಂಗಳೂರು: ಜಪಾನ್‌ನಲ್ಲಿ ನಡೆಯುತ್ತಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಭೇಟೆಯಾಡುವವರದ್ದೇ ಸುದ್ದಿ. ಇದನ್ನು ಹೊರತುಪಡಿಸಿ ಒಲಿಂಪಿಕ್ಸ್‌ನಲ್ಲಿನ ಕೆಲವು ಸಂಗತಿಗಳು ಜಾಗತಿಕ ಸದ್ದು ಮಾಡುತ್ತವೆ.
ಸೆಮಿಪೈನಲ್‌ನಲ್ಲಿ ಪದಕ ವಂಚಿತರಾದ ಪೆನ್ಸರ್ ಕ್ರೀಡೆಯ ಕ್ರೀಡಾಪಟು ಅರ್ಜೆಂಟೈನಾದ ಮರಿಯಾ ಬೆಲೆನ್ ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಪತ್ರಿಕಾಗೋಷ್ಟಿಯಲ್ಲೇ ತಮ್ಮ ಕೋಚ್ ಲುಕಾಸ್ ಗುಲ್ಲೆರ್ಮೊ ಅವರು ಮಾಡಿದ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡು ಮರಿಯಾ ಅವರು ಅಲ್ಲೇ ಆನಂದಭಾಷ್ಪ ಸುರಿಸಿದ್ದಾರೆ.
ಪೆನ್ಸಿಂಗ್ ಸೆಮಿಪೈನಲ್ ಪಂದ್ಯ ಮುಗಿದ ಮೇಲೆ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಲು ಬಂದ ಮರಿಯಾ ಅವರಿಗೆ ಅವರ ಕೋಚ್ ಗುಲ್ಲೆರ್ಮೊ ಅವರು, ಕೈ ಬರಹದಲ್ಲಿ ಬರೆದ ಫಲಕವನ್ನು ತೋರಿಸಿ‘Will you marry me? Please’ ಎಂದು ನಿವೇದನೆ ಮಾಡಿಕೊಂಡಿದ್ದಾರೆ.
ಇದನ್ನು ನೋಡಿದ ಮರಿಯಾ ಅವರು ಸಂತೋಷಭರಿತರಾಗಿ ಒಪ್ಪಿಕೊಂಡು ಗುಲ್ಲೆರ್ಮೊ ಅವರನ್ನು ಚುಂಬಿಸಿ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶೇಷವೆಂದರೆ ಕಳೆದ 11 ವರ್ಷದ ಹಿಂದೆ ಪೆನ್ಸಿಂಗ್ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಫ್ ಇದ್ದಾಗಲೂ ಗುಲ್ಲೆರ್ಮೊ ಅವರು ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಆದರೆ, ಅಂದು ಮರಿಯಾ ಅದನ್ನು ನಯವಾಗಿಯೇ ನಿರಾಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.