ಲಾಹೋರ್: ಪಾಕಿಸ್ತಾನ ರಾಜಕೀಯದಲ್ಲಿ ಸೇನಾ ಮುಖ್ಯಸ್ಥರೇ ಅತ್ಯಂತ ಪ್ರಭಾವಿ ವ್ಯಕ್ತಿ. ಎಲ್ಲರೂ ಅವರ ನಿರ್ಧಾರಗಳನ್ನು ಅನುಸರಿಸುತ್ತಾರೆ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಶುಕ್ರವಾರ ತಮ್ಮ ನಿವಾಸದಲ್ಲಿ ಪಾಕಿಸ್ತಾನ–ಇ–ಇನ್ಸಾಫ್ (ಪಿಟಿಐ) ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾನು ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ದೇಶದ ಮಿಲಿಟರಿ ವ್ಯವಸ್ಥೆಯು ಷರೀಫ್ ಮತ್ತು ಜರ್ದಾರಿ ಅವರ ‘ಭ್ರಷ್ಟ ಮಾಫಿಯಾ’ ಪರವಾಗಿದೆ’ ಎಂದು ಆರೋಪಿಸಿದರು.
ಸುಪ್ರೀಂ ಕೋರ್ಟ್ ವಿಭಜನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅವರು, ಇದು ದೇಶದ ಪಾಲಿಗೆ ದುರಂತವಾಗಲಿದೆ. ‘ಆಮದು ಸರ್ಕಾರ’ ಸುಪ್ರೀಂ ಕೋರ್ಟ್‌ಗೆ ಅಪಖ್ಯಾತಿ ತರುತ್ತಿರುವ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಪರ ನಿಲ್ಲುವಂತೆ ಜನತೆಗೆ ಕರೆ ನೀಡಿದರು.
ದೇಶದ ವಿದ್ಯುನ್ಮಾನ ಮಾಧ್ಯಮಗಳು ಇಮ್ರಾನ್ ಖಾನ್ ಅವರ ಭಾಷಣವನ್ನು ಪ್ರಸಾರ ಮಾಡದಂತೆ ಇಲ್ಲಿನ ಸರ್ಕಾರ ‘ಅಘೋಷಿತ ನಿಷೇಧ’ ಹೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.