ADVERTISEMENT

ನಿಜ್ಜರ್‌ಗೆ ಕೆನಡಾ ಗೌರವ: ಏಐ ವಿಮಾನದ ಮೇಲಿನ ದಾಳಿ ನೆನಪಿಸಿದ ಭಾರತೀಯ ದೂತವಾಸ

ಏಜೆನ್ಸೀಸ್
Published 19 ಜೂನ್ 2024, 10:56 IST
Last Updated 19 ಜೂನ್ 2024, 10:56 IST
<div class="paragraphs"><p>ಭಾರತೀಯ ದೂತವಾಸ</p></div>

ಭಾರತೀಯ ದೂತವಾಸ

   

ಒಟ್ಟಾವ: ಹತ್ಯೆಯಾದ ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ ಸಿಂಗ್ ನಿಜ್ಜರ್‌ಗೆ ಕೆನಡಾ ಸಂಸತ್‌ ಒಂದು ನಿಮಿಷ ಗೌರವ ಸಲ್ಲಿಸಿರುವುದಕ್ಕೆ ಇಲ್ಲಿನ ಭಾರತೀಯ ರಾಯಭಾರ ಕಚೇರಿ ಆಕ್ರೋಶ ವ್ಯಕ್ತಪಡಿಸಿದೆ. 

ಮಂಗಳವಾರ ಹೌಸ್ ಆಫ್ ಕಾಮನ್ಸ್‌ನಲ್ಲಿ ಸಂಸದರು ಒಂದು ನಿಮಿಷ ಮೌನ ಆಚರಿಸಿದ್ದಾರೆ. ಸ್ಪೀಕರ್ ಗ್ರೆಗ್ ಫರ್ಗುಸ್ ಅವರು ನಿಜ್ಜರ್‌ ಅವರಿಗೆ ಗೌರವ ಸಲ್ಲಿಸುವ ನಿಲುವಳಿ ಮಂಡಿಸಿದರು. ಇದಕ್ಕೆ ಎಲ್ಲಾ ಪಕ್ಷಗಳು ಒಪ್ಪಿಗೆ ಸೂಚಿಸಿದ ನಂತರ ಸಂಸದರು ಎದ್ದು ನಿಂತು ಮೌನಾಚರಣೆ ಮಾಡಿದರು.

ADVERTISEMENT

ಈ ಘಟನೆಗೆ ಭಾರತೀಯ ದೂತವಾಸ ಖಂಡನೆ ವ್ಯಕ್ತಪಡಿಸಿದ್ದು ಏರ್‌ ಇಂಡಿಯಾ ವಿಮಾನದ ಮೇಲಿನ ದಾಳಿಯಲ್ಲಿ ಮೃತಪಟ್ಟವರನ್ನು ಸ್ಮರಿಸುವುದಾಗಿ ತಿಳಿಸಿದೆ. 

ವ್ಯಾಂಕೋವರ್‌ನಲ್ಲಿರುವ ಭಾರತೀಯ ದೂತಾವಾಸ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಏರ್ ಇಂಡಿಯಾ ವಿಮಾನದ (ಕಾನಿಷ್ಕ) ಮೇಲೆ ನಡೆದ ಬಾಂಬ್ ದಾಳಿಯನ್ನು ಜಗತ್ತಿಗೆ ನೆನಪಿಸಿದೆ.

1985ರಲ್ಲಿ ಏರ್ ಇಂಡಿಯಾ (ಏಐ) ಕಾನಿಷ್ಕ ವಿಮಾನದ ಮೇಲೆ ಖಾಲಿಸ್ತಾನಿ ಉಗ್ರರು ಬಾಂಬ್ ದಾಳಿ ನಡೆಸಿದ್ದರು. ಘಟನೆಯಲ್ಲಿ 329 ಜನರು ಸಾವನ್ನಪ್ಪಿದ್ದರು. ಮೃತರನ್ನು ಸ್ಮರಿಸಲು ಭಾರತೀಯ ದೂತವಾಸ ತೀರ್ಮಾನಿಸಿದ್ದು, ಜೂನ್‌ 23ರಂದು(ಭಾನುವಾರ) ಸಂಜೆ 6:30ಕ್ಕೆ ಸ್ಟಾನ್ಲಿ ಪಾರ್ಕ್‌ ಆಟದ ಮೈದಾನದಲ್ಲಿ ಮೌನಾಚರಣೆ ಮಾಡಲಾಗುವುದು ಎಂದು ಭಾರತೀಯ ದೂತವಾಸ ತಿಳಿಸಿದೆ. 

ಏರ್‌ ಇಂಡಿಯಾ ವಿಮಾನದ ಮೇಲಿನ ದಾಳಿಯ ಮಾಸ್ಟರ್‌ ಮೈಂಡ್‌ ನಿಜ್ಜರ್‌ ಎಂದು ಭಾರತೀಯ ತನಿಖಾ ಸಂಸ್ಥೆಗಳು ಹೇಳಿದ್ದವು. ಹಾಗೂ ನಿಜ್ಜರ್‌ ಬಂಧಿಸಲು ತನಿಖಾ ಸಂಸ್ಥೆಗಳು ಸಾಕಷ್ಟು ಸಲ ಪ್ರಯತ್ನ ಮಾಡಿದ್ದವು. ಆದಾಗ್ಯೂ ನಿಜ್ಜರ್‌ ಸಿಕ್ಕಿರಲಿಲ್ಲ. 2023ರ ಜೂನ್ 18ರಂದು ಕೊಲಂಬಿಯಾದ ಸರ್ರೆಯಲ್ಲಿ ನಿಜ್ಜರ್‌ ಹತ್ಯೆ ಮಾಡಲಾಗಿತ್ತು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.