ಬೀಜಿಂಗ್/ಕೊಲಂಬೊ: ಉಪಗ್ರಹಗಳ ಜಾಡು ಮತ್ತು ಖಂಡಾಂತರ ಕ್ಷಿಪಣಿಗಳನ್ನು ಪತ್ತೆಹಚ್ಚುವಚೀನಾದ ಅತ್ಯಾಧುನಿಕ ಕಣ್ಗಾವಲು ಮತ್ತು ಸಂಶೋಧನಾ ನೌಕೆಯುಶ್ರೀಲಂಕಾ ದಕ್ಷಿಣದ ಹಂಬಂಟೋಟ ಬಂದರಿನಲ್ಲಿ ಮಂಗಳವಾರ ಲಂಗರು ಹಾಕಿದೆ.
‘ಯುವಾನ್ ವಾಂಗ್ 5’ ನೌಕೆ ಬೆಳಿಗ್ಗೆ 8.20ಕ್ಕೆ ಬಂದರು ಪ್ರವೇಶಿಸಿತು. ಇದೇ22ರವರೆಗೆ ನೌಕೆ ಬಂದರಿನಲ್ಲಿರಲಿದೆ’ ಎಂದು ಶ್ರೀಲಂಕಾ ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿನ ಭದ್ರತೆಯ ಬಗ್ಗೆಭಾರತ ಮತ್ತು ಅಮೆರಿಕದ ಕಳವಳದ ಮಧ್ಯೆ ಚೀನಾ,ಈ ಅತ್ಯಾಧುನಿಕ ಸಂಶೋಧನಾ ನೌಕೆಯು ಯಾವುದೇ ದೇಶದ ಭದ್ರತೆಗೆ ಧಕ್ಕೆಯುಂಟು ಮಾಡುವುದಿಲ್ಲ. ಮೂರನೇ ದೇಶದ ಆರ್ಥಿಕತೆಗೆ ಹಾನಿ ಮಾಡುವುದಿಲ್ಲ ಎಂದು ಹೇಳಿದೆ.
ನೌಕೆಯು ಶ್ರೀಲಂಕಾದ ಸಂಪೂರ್ಣ ಸಹಕಾರದಿಂದ ಹಿಂದೂ ಮಹಾಸಾಗರದ ಬಂದರಿನಲ್ಲಿ ಲಂಗರು ಹಾಕಿದೆ. ಈ ನೌಕೆಯು ಅಂತರರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಸಾಗರದಲ್ಲಿ ಸಂಶೋಧನಾ ಚಟುವಟಿಕೆಗಳನ್ನು ನಡೆಸಲಿದೆ ಎಂದುಚೀನಾ ವಿದೇಶಾಂಗ ಸಚಿವಾಲಯದ ವಾಂಗ್ ವೆನ್‌ಬಿನ್ ಸ್ಪಷ್ಟಪಡಿಸಿದ್ದಾರೆ.
ಭಾರತವು ತನ್ನ ರಕ್ಷಣಾ ವ್ಯವಸ್ಥೆಯ ಸೂಕ್ಷ್ಮ ಮಾಹಿತಿಯ ಗೂಢಚಾರಿಕೆಗೆ ಚೀನಿ ನೌಕೆ ಬರುತ್ತಿರುವುದಾಗಿ ಕಳವಳ ವ್ಯಕ್ತಪಡಿಸಿದ್ದರಿಂದ ಆರಂಭದಲ್ಲಿ ಲಂಕಾವು ಚೀನಿ ನೌಕೆಗೆ ಪ್ರವೇಶ ನಿರಾಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.