ಪ್ಯೊಂಗ್ಯಾಂಗ್: ಅಮೆರಿಕದ ಹೌಸ್ ಆಫ್ ರಿಪ್ರಸಂಟೆಟಿವ್ಸ್‌ಸ್ಪೀಕರ್ ನ್ಯಾನ್ಸಿ ಪೆಲೊಸಿ ತೈವಾನ್‌ಗೆ ಭೇಟಿ ನೀಡಿರುವುದು ಅಂತರರಾಷ್ಟ್ರೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ.
ತೈವಾನ್ ವಿಷಯದಲ್ಲಿ ಅಮೆರಿಕ ಹಸ್ತಕ್ಷೇಪ ಇರಕೂಡದು ಎಂದು ಖಂಡತುಂಡವಾಗಿ ಹೇಳಿರುವ ಚೀನಾ ಪೆಲೊಸಿ ಭೇಟಿಯನ್ನು ತೀವ್ರವಾಗಿ ಖಂಡಿಸಿದೆ. ಈಬೆನ್ನಲ್ಲೇ ಉತ್ತರ ಕೊರಿಯಾ ಕೂಡ ಚೀನಾ ಬೆಂಬಲಕ್ಕೆ ನಿಂತಿದೆ.
‘ತೈವಾನ್ ಮೇಲೆ ಅಮೆರಿಕ ಹಿಡಿತ ಸಾಧಿಸಲು ಹೋದರೆ ಸರಿ ಇರುವುದಿಲ್ಲ. ನಾವು ಈ ವಿಷಯದಲ್ಲಿ ಸಂಪೂರ್ಣವಾಗಿ ಚೀನಾ ಬೆಂಬಲಕ್ಕೆ ನಿಲ್ಲುತ್ತೇವೆ’ ಎಂದು ಉತ್ತರ ಕೊರಿಯಾ ನಿರ್ಧಾರ ತೆಗೆದುಕೊಂಡಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ದ್ವೀಪ ರಾಷ್ಟ್ರ ತೈವಾನ್ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿರುವ ಚೀನಾದ ನಡೆಯನ್ನು ತೈವಾನ್ ತೀವ್ರವಾಗಿ ವಿರೋಧಿಸುತ್ತಿದೆ. ತೈವಾನ್ ಬೆಂಬಲಕ್ಕೆ ಅಮೆರಿಕ ನಿಂತಿರುವುದು ಚೀನಾವನ್ನು ಕಂಗೆಡಿಸಿದೆ. ತೈವಾನ್ ಚೀನಾದ ಅವಿಭಾಜ್ಯ ಅಂಗ ಎಂದು ಸಾಧಿಸಿದೆ. ಆದರೆ, ತೈವಾನ್ ಜನ ಚೀನಾವನ್ನು ವಿರೋಧಿಸುತ್ತಿದ್ದು, ಪೆಲೋಸಿ ಅವರ ಭೇಟಿ ಹಿನ್ನೆಲೆಯಲ್ಲಿ ನಾವು ಅಮೆರಿಕವನ್ನು ಪ್ರೀತಿಸುತ್ತೇವೆ ಎಂದು ಬ್ಯಾನರ್‌ಗಳನ್ನು ಹಿಡಿದು ಭರ್ಜರಿ ಸ್ವಾಗತ ಕೋರಿದ್ದಾರೆ.
ಇನ್ನು ಪೆಲೊಸಿ ತೈವಾನ್ ವಿಮಾನ ನಿಲ್ದಾಣದಲ್ಲಿ ಇಳಿಯುವ ಮುನ್ನ ಖಡಕ್ ಆಗಿ ಹೇಳಿಕೆ ಬಿಡುಗಡೆ ಮಾಡಿದ್ದಚೀನಾ, ಪೆಲೊಸಿಭೇಟಿಯು ದ್ವಿಪಕ್ಷೀಯ ಬಾಂಧವ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ ಮತ್ತು ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆಗೆ ಭಂಗ ತರಲಿದೆ ಎಂದು ಮಂಗಳವಾರ ಎಚ್ಚರಿಸಿದೆ.
ಪೆಲೊಸಿಮಂಗಳವಾರ ರಾತ್ರಿ ತೈವಾನ್ ರಾಜಧಾನಿ ತೈಪೆಗೆ ಬಂದಿಳಿದರು. ಅವರು 25 ವರ್ಷಗಳಲ್ಲಿ ತೈವಾನ್‌ಗೆ ಭೇಟಿ ನೀಡಿದ ಅಮೆರಿಕರಾಜ್ಯಾಂಗದ ಪ್ರಮುಖರಾಗಿದ್ದಾರೆ.
ತೈವಾನ್ ಮೇಲೆ ಚೀನಾದ ಮಿಲಿಟರಿ ಕಾರ್ಯಾಚರಣೆಯ ಕಾರ್ಮೋಡ
ಪೆಲೊಸಿ ಭೇಟಿಗೆ ಪ್ರತಿಯಾಗಿ ತೈವಾನ್ ಮೇಲೆ ಚೀನಾ ಉದ್ದೇಶಿತ ಮಿಲಿಟರಿ ಕಾರ್ಯಾಚರಣೆಗೆ ಯೋಜಿಸಿದೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.
‘ಇದು ಚೀನಾ-ಅಮೆರಿಕದ ಸಂಬಂಧಗಳ ರಾಜಕೀಯ ಅಡಿಪಾಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಮತ್ತು ಚೀನಾದ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಗಂಭೀರವಾಗಿ ಉಲ್ಲಂಘಿಸುತ್ತದೆ. ತೈವಾನ್ ಜಲಸಂಧಿಯಾದ್ಯಂತ ಶಾಂತಿ ಮತ್ತು ಸ್ಥಿರತೆಯನ್ನು ಗಂಭೀರವಾಗಿ ಹಾಳುಮಾಡುತ್ತದೆ. ಪ್ರತ್ಯೇಕತಾವಾದಿ ಶಕ್ತಿಗಳಿಗೆ ತೈವಾನ್ ಸ್ವಾತಂತ್ರ್ಯಕ್ಕಾಗಿ ಗಂಭೀರ ತಪ್ಪು ಸಂಕೇತವನ್ನು ಕಳುಹಿಸುತ್ತದೆ. ಚೀನಾ ಇದನ್ನು ದೃಢವಾಗಿ ವಿರೋಧಿಸುತ್ತದೆ ಹಾಗೂ ಕಠಿಣವಾಗಿ ಖಂಡಿಸುತ್ತದೆ’ಎಂದು ಅದು ಹೇಳಿದೆ.
ಪ್ರಪಂಚದಲ್ಲಿ ಒಂದೇ ಚೀನಾ ಇದೆ. ತೈವಾನ್ ಚೀನಾದ ಭೂಪ್ರದೇಶದ ಅವಿಭಾಜ್ಯ ಭಾಗವಾಗಿದೆ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಸರ್ಕಾರವು ಇಡೀ ಚೀನಾವನ್ನು ಪ್ರತಿನಿಧಿಸುವ ಏಕೈಕ ಕಾನೂನು ಹೊಂದಿದೆ ಎಂದು ತಿಳಿಸಿದೆ.
ಇದನ್ನು ವಿಶ್ವಸಂಸ್ಥೆಯ ಸಾಮಾನ್ಯ ನಿರ್ಣಯದ ಮೂಲಕ ಸ್ಪಷ್ಟವಾಗಿ ಗುರುತಿಸಲಾಗಿದೆ ಮತ್ತು 181 ದೇಶಗಳು ಏಕ-ಚೀನಾ ತತ್ವದ ಆಧಾರದ ಮೇಲೆ ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿವೆ ಎಂದು ಅದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.