ADVERTISEMENT

ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅಫ್ಗಾನಿಸ್ತಾನಕ್ಕೆ ಮರಳಬಹುದು: ತಾಲಿಬಾನ್

ಡೆಕ್ಕನ್ ಹೆರಾಲ್ಡ್
Published 23 ಆಗಸ್ಟ್ 2021, 1:10 IST
Last Updated 23 ಆಗಸ್ಟ್ 2021, 1:10 IST
ಅಫ್ಗಾನಿಸ್ತಾನದ ಮಾಜಿ ಅಧ್ಯ್ಷ ಅಶ್ರಫ್ ಘನಿ
ಅಫ್ಗಾನಿಸ್ತಾನದ ಮಾಜಿ ಅಧ್ಯ್ಷ ಅಶ್ರಫ್ ಘನಿ   

ಕಾಬೂಲ್: ಮಾಜಿ ಅಧ್ಯಕ್ಷ ಅಶ್ರಫ್ ಘನಿ ಮತ್ತು ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಬಯಸಿದಲ್ಲಿ ಅಫ್ಗಾನಿಸ್ತಾನಕ್ಕೆ ಮರಳಬಹುದು ಎಂದು ತಾಲಿಬಾನ್ ತಿಳಿಸಿದೆ.

ನಮ್ಮ ಸಂಘಟನೆ ಮತ್ತು ಘನಿ, ಸಲೇಹ್ ಹಾಗೂ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಮ್ದುಲ್ಲಾ ಮೊಹಿಬ್ ನಡುವೆ ಶತ್ರುತ್ವ ಇಲ್ಲ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾಲಿಬಾನ್‌ನ ಹಿರಿಯ ನಾಯಕ ಖಲೀಲ್ ಉಲ್ ರಹಮಾನ್ ಹಕ್ಕಾನಿ ಹೇಳಿರುವುದಾಗಿ ‘ಐಎಎನ್‌ಎಸ್’ ವರದಿ ಮಾಡಿದೆ.

‘ತಾಲಿಬಾನ್ ಮತ್ತು ಮೂವರ ನಡುವಣ ವೈರ ಕೇವಲ ಧರ್ಮಕ್ಕೆ ಸಂಬಂಧಿಸಿದ್ದಾಗಿತ್ತು. ನಾವು ಘನಿ, ಅಮರುಲ್ಲಾ ಸಲೇಹ್‌ ಮತ್ತು ಮೊಹಿಬ್ ಅವರನ್ನು ಕ್ಷಮಿಸುತ್ತೇವೆ’ ಎಂದು ಹಕ್ಕಾನಿ ಹೇಳಿದ್ದಾನೆ.

ADVERTISEMENT

‘ನಮ್ಮ ಕಡೆಯಿಂದ ಎಲ್ಲರನ್ನೂ ಕ್ಷಮಿಸುತ್ತೇವೆ. ನಮ್ಮ ವಿರುದ್ಧ ಹೋರಾಡಿದವರಿಂದ ಹಿಡಿದು ಸಾಮಾನ್ಯ ಜನರ ವರೆಗೆ ಎಲ್ಲರನ್ನೂ ಕ್ಷಮಿಸುತ್ತೇವೆ’ ಎಂದು ಆತ ಹೇಳಿದ್ದಾನೆ.

ದೇಶದಿಂದ ಜನರು ಪಲಾಯನ ಮಾಡಬಾರದು. ತಾಲಿಬಾನಿಗಳು ಸೇಡು ತೀರಿಸಿಕೊಳ್ಳುತ್ತಾರೆ ಎಂಬುದು ಶತ್ರುಗಳ ಅಪ ಪ್ರಚಾರವಷ್ಟೇ ಎಂದು ಹಕ್ಕಾನಿ ಹೇಳಿದ್ದಾನೆ.

ಅಫ್ಗಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುತ್ತಿದ್ದಂತೆಯೇ ಅಧ್ಯಕ್ಷ ಅಶ್ರಫ್ ಘನಿ ದೇಶ ತೊರೆದಿದ್ದರು. ಬಳಿಕ ಅವರು ದುಬೈನಲ್ಲಿ ಪತ್ತೆಯಾಗಿದ್ದರು. ಘನಿ ಅವರಿಗೆ ಮಾನವೀಯತೆ ಆಧಾರದ ಮೇಲೆ ಆಶ್ರಯ ನೀಡಿರುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.