ವಾಷಿಂಗ್ಟನ್: ಭಾರತ ಮೂಲದ 24 ವರ್ಷದ ಅಶ್ವಿನ್ ರಾಮಸ್ವಾಮಿ ಅವರು ಅಮೆರಿಕದ ಜಾರ್ಜಿಯಾದಿಂದ ಸೆನೆಟರ್ ಸ್ಥಾನಕ್ಕೆ ಸ್ಪರ್ಧಿಸಿ ದಾಖಲೆ ನಿರ್ಮಿಸುವ ಹಾದಿಯಲ್ಲಿದ್ದಾರೆ. ಅಮೆರಿಕದ ರಾಜಕಾರಣದಲ್ಲಿ ಭಾರತ ಮೂಲದ ‘ಜನರೇಷನ್ ಝೆಡ್’ ಯುವಕನೊಬ್ಬ ಚುನಾವಣೆ ಕಣಕ್ಕಿಳಿಯಲಿರುವುದು ಇದೇ ಮೊದಲು.
‘ಜನರೇಷನ್ ಝೆಡ್’ ಎಂದರೆ 1997ರಿಂದ 2012ರ ನಡುವೆ ಹುಟ್ಟಿದವರು. ಇವರನ್ನು ‘ಝೂಮರ್ಸ್’ ಎಂದೂ ಕರೆಯಲಾಗುತ್ತದೆ. ಅಶ್ವಿನ್ ಪೋಷಕರು 1990ರಲ್ಲಿ ತಮಿಳುನಾಡಿನಿಂದ ಅಮೆರಿಕಕ್ಕೆ ಹೋಗಿ ನೆಲೆಸಿದ್ದರು. ಸಾಫ್ಟ್‌ವೇರ್ ಎಂಜಿನಿಯರಿಂಗ್ ಆಗಿರುವ ಅಶ್ವಿನ್, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಯಾರಿ ನಡೆಸಲಿದ್ದಾರೆ.
ಅಶ್ವಿನ್ ರಾಮಸ್ವಾಮಿ ಗೆಲುವು ಸಾಧಿಸಿದರೆ, ಜಾರ್ಜಿಯಾದ ‘ಜನರೇಷನ್ ಝೆಡ್’ನ ಮೊದಲ ಸೆನೆಟರ್ ಆಗಲಿದ್ದಾರೆ. ಅದೇ ರೀತಿ, ಜಾರ್ಜಿಯಾ ಶಾಸನಸಭೆಗೆ ಅಯ್ಕೆಯಾದ ಮೊದಲ ಭಾರತೀಯ ಅಮೆರಿಕನ್ ಆಗಿ ದಾಖಲೆ ನಿರ್ಮಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.