ADVERTISEMENT

ಜಪಾನ್: ಏಕಾಂಗಿಯಾಗಿ ಪೆಸಿಫಿಕ್‌ ಸಮುದ್ರಯಾನ ನಡೆಸಿದ 83 ವರ್ಷ ವಯಸ್ಸಿನ ವ್ಯಕ್ತಿ

ಏಜೆನ್ಸೀಸ್
Published 4 ಜೂನ್ 2022, 14:17 IST
Last Updated 4 ಜೂನ್ 2022, 14:17 IST
ಕೆನಿಚಿ ಹೊರಿ
ಕೆನಿಚಿ ಹೊರಿ   

ಟೋಕಿಯೊ: ಜಪಾನ್‌ನ 83 ವರ್ಷ ವಯಸ್ಸಿನ ಸಾಹಸಿಯೊಬ್ಬರು ಏಕಾಂಗಿಯಾಗಿ, ತಡೆರಹಿತವಾಗಿಪೆಸಿಫಿಕ್‌ ಸಮುದ್ರಯಾನವನ್ನು ಯಶಸ್ವಿಯಾಗಿಶನಿವಾರ ಪೂರ್ಣಗೊಳಿಸಿದ್ದಾರೆ. ಈ ಮೈಲಿಗಲ್ಲನ್ನು ಸ್ಥಾಪಿಸಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೆನಿಚಿ ಹೊರಿ ಎಂಬುವವರು ಮಾರ್ಚ್‌ನಲ್ಲಿ ಸ್ಯಾನ್ ಫ್ರಾನ್ಸಿಸ್ಕೊ ಬಂದರಿನಿಂದ ದೋಣಿಯೊಂದರಲ್ಲಿ ಪಯಣ ಆರಂಭಿಸಿದ್ದರು. ಈ ಸಾಹಸಯಾನವನ್ನು 69 ದಿನಗಳಲ್ಲಿ ಪೂರ್ಣಗೊಳಿಸಿರುವ ಅವರು, ಜಪಾನ್‌ನ ಪಶ್ಚಿಮ ಕರಾವಳಿಯ ಕಿಯಿ ಜಲಸಂಧಿಯನ್ನು ತಲುಪಿದ್ದಾರೆ.

ಕೆನಿಚಿ ಅವರು 1962ರಲ್ಲಿ ಜಪಾನ್‌ನಿಂದ ಸ್ಯಾನ್‌ ಫ್ರಾನ್ಸಿಸ್ಕೊಕ್ಕೆ ಪಯಣಿಸಿದ್ದರು. ಪೆಸಿಫಿಕ್‌ ಸಾಗರ ಮಾರ್ಗವಾಗಿ ಈ ಸಾಹನ ಮಾಡಿದ ವಿಶ್ವದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.