ಪೆಶಾವರ: ಪಾಕಿಸ್ತಾನದ ವಾಯವ್ಯ ಪ್ರಾಂತ್ಯ ಖೈಬರ್ ಪಂಖ್ತುಂಖ್ವದಲ್ಲಿ ಉಗ್ರರು ಮಂಗಳವಾರ ತಡರಾತ್ರಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ 12 ಯೋಧರು ಮೃತಪಟ್ಟಿದ್ದಾರೆ.
ಬಳಿಕ, ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 6 ಉಗ್ರರು ಮೃತಪಟ್ಟಿರುವುದಾಗಿ ಪಾಕಿಸ್ತಾನ ಸೇನೆ ಬುಧವಾರ ತಿಳಿಸಿದೆ.
‘ಬನ್ನು ಜಿಲ್ಲೆಯ ಮಲಿಖೇಲ್‌ನಲ್ಲಿರುವ ಚೆಕ್‌ಪೋಸ್ಟ್ ಮೇಲೆ ದಾಳಿ ನಡೆಸಲು ಉಗ್ರರು ಯತ್ನಿಸಿದಾಗ, ಭದ್ರತಾ ಪಡೆಗಳು ಅವರನ್ನು ತಡೆದವು. ನಂತರ ಉಗ್ರರು ಸ್ಫೋಟಕ ತುಂಬಿದ್ದ ವಾಹನವನ್ನು ಚೆಕ್‌ಪೋಸ್ಟ್‌ಗೆ ನುಗ್ಗಿಸಿದ್ದು, ಆಗ ಸಂಭವಿಸಿದ ಸ್ಫೋಟದಿಂದಾಗಿ ಚೆಕ್‌ಪೋಸ್ಟ್ ಕಟ್ಟದ ಕುಸಿದಿದೆ. ಘಟನೆಯಲ್ಲಿ 12 ಯೋಧರು ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಸೇನೆಯ ಮಾಧ್ಯಮ ವಿಭಾಗ ತಿಳಿಸಿದೆ.
ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭಯೋತ್ಪಾದಕ ದಾಳಿಗಳು ಈಚೆಗೆ ವಿಪರೀತಗೊಂಡಿದ್ದ ಕಾರಣ, ಜಂಟಿ ಸೇನಾ ಕಾರ್ಯಾಚರಣೆ ನಡೆಸಿ ಭಯೋತ್ಪಾದನೆಯನ್ನು ನಿಗ್ರಹಿಸಲು ಪಾಕಿಸ್ತಾನ ಸರ್ಕಾರ ಹಾಗೂ ಸೇನೆ ಮಂಗಳವಾರ ಅನುಮೋದನೆ ನೀಡಿದ್ದವು. ಬೆನ್ನಲ್ಲೆ ಉಗ್ರರು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.