ಮಾಸ್ಕೊ: ಪೂರ್ವ ರಷ್ಯಾದ ಝೆಯ್‌ಸ್ಕ್ ಜಿಲ್ಲೆಯಲ್ಲಿರುವ ಚಿನ್ನದ ಗಣಿ ಕುಸಿದು ಬಿದ್ದಿದ್ದು, ಕನಿಷ್ಠ 13 ಜನರು ಅದರೊಳಗೆ ಸಿಲುಕಿದ್ದಾರೆ ಎಂದು ಪ್ರಾದೇಶಿಕ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
‘ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. 125 ಮೀಟರ್ ಆಳದಲ್ಲಿ ಸಿಲುಕಿರುವ ಸಂತ್ರಸ್ತರನ್ನು ತಲುಪಲು ಕ್ಷೀಪ್ರ ಕಾರ್ಯಾಚರಣೆ ಪಡೆ ಹರಸಾರಸ ನಡೆಸುತ್ತಿದೆ’ ಎಂದು ತಿಳಿಸಿದ್ದಾರೆ.
ಅವಘಡಕ್ಕೆ ಕಾರಣ ಏನೆಂದು ಅಧಿಕಾರಿಗಳು ಇನ್ನೂ ತಿಳಿಸಿಲ್ಲ. ಸುರಕ್ಷತಾ ಮಾನದಂಡ ಉಲ್ಲಂಘನೆಯಿಂದಲೇ ಈ ಹಿಂದೆ ಇಂಥ ಅನೇಕ ಅವಘಡಗಳು ಸಂಭವಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.