ಗಾಜಾಪಟ್ಟಿ: ಮಧ್ಯ ಗಾಜಾದ ಶಾಲೆಯೊಂದರ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ 20 ಜನ ಸಾವಿಗೀಡಾಗಿದ್ದಾರೆ.
ಅಲ್ ಅವ್ಡಾ ಮತ್ತು ಅಲ್ ಅಕ್ಸಾ ಆಸ್ಪತ್ರೆಗಳ ಅಧಿಕಾರಿಗಳ ಪ್ರಕಾರ, ಗಾಜಾದ ನುಸೆರಾತ್ ನಿರಾಶ್ರಿತರ ಶಿಬಿರದಲ್ಲಿರುವ ಅಲ್ ಮುಫ್ತಿ ಶಾಲೆಯ ಮೇಲೆ ದಾಳಿ ಮಾಡಲಾಗಿದೆ. ಯುದ್ಧದಿಂದ ಸ್ಥಳಾಂತರಗೊಂಡ ಅನೇಕ ಪ್ಯಾಲೆಸ್ಟೀನಿಯನ್ನರಿಗೆ ಈ ಶಾಲೆಯಲ್ಲಿ ಆಶ್ರಯ ನೀಡಲಾಗಿತ್ತು.
ಮತ್ತೊಂದೆಡೆ ಗಾಜಾಪಟ್ಟಿಯ ಉತ್ತರ ಭಾಗವನ್ನು ಹಾಗೂ ಗಾಜಾ ನಗರವನ್ನು ಸಂಪೂರ್ಣವಾಗಿ ತೊರೆಯುವಂತೆ ಇಸ್ರೇಲ್ ಸೇನೆ ಪ್ಯಾಲೆಸ್ಟೀನಿಯನ್ನರಿಗೆ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.