ADVERTISEMENT

ಬುರ್ಕಿನಾ ಫಾಸೊದಲ್ಲಿ ಜಿಹಾದಿಗಳ ದಾಳಿ: ಕನಿಷ್ಠ 44 ಸಾವು

ಏಜೆನ್ಸೀಸ್
Published 9 ಏಪ್ರಿಲ್ 2023, 2:35 IST
Last Updated 9 ಏಪ್ರಿಲ್ 2023, 2:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಡಕಾರ್: ಉತ್ತರ ಬುರ್ಕಿನಾ ಫಾಸೊದಲ್ಲಿ ಇಸ್ಲಾಮಿಕ್ ಜಿಹಾದಿ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 44 ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಸೆನೊ ಪ್ರಾಂತ್ಯದ ಕೌರಕಾ ಮತ್ತು ತೊಂಡೊಬಿ ಗ್ರಾಮಗಳಲ್ಲಿ ಜಿಹಾದಿ ಉಗ್ರರು ದಾಳಿ ನಡೆಸಿದ್ದಾರೆ ಎಂದು ಸಹೇಲ್ ಪ್ರದೇಶದ ಗವರ್ನರ್ ಲೆಫ್ಟಿನೆಂಟ್ ಕರ್ನಲ್, ರೊಡಾಲ್ಫ್ ಸೊರ್ಗೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಶ್ಚಿಮ ಆಫ್ರಿಕಾದ ರಾಷ್ಟ್ರದಲ್ಲಿ ಅಲ್‌-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಸೇರಿದ ಜಿಹಾದಿ ಉಗ್ರರ ದಾಳಿಯಿಂದಾಗಿ ಕಳೆದ ಆರು ವರ್ಷಗಳಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದು, 20 ಲಕ್ಷಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದಾರೆ.

ADVERTISEMENT

ಫೆಬ್ರುವರಿ ತಿಂಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸಿದ ದಾಳಿಯಲ್ಲಿ 70ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದರು.

ಕೆಲವು ವಾರಗಳ ಹಿಂದೆಯಷ್ಟೇ ನಡೆಸಿದ ಮಗದೊಂದು ದಾಳಿಯಲ್ಲಿ ಸೈನಿಕರು, ನಾಗರಿಕರು ಸೇರಿದಂತೆ 32 ಮಂದಿ ಸಾವಿಗೀಡಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.