ಬುನಿಯಾ (ಡಿಆರ್ ಕಾಂಗೊ): ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದ ಪೂರ್ವ ಭಾಗದಲ್ಲಿ ನಡೆದ ಎರಡು ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ 50 ಜನರು ಸಾವಿಗೀಡಾಗಿದ್ದಾರೆ.
ಇಸ್ಲಾಮಿಕ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಎಡಿಎಫ್ ದಾಳಿಕೋರರು ದಾಳಿಗೆ ಕಾರಣ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಕಿವು ಸೆಕ್ಯುರಿಟಿ ಟ್ರ್ಯಾಕರ್ ಪ್ರಕಾರ, ಬೋಗಾದಲ್ಲಿ 28 ಮಂದಿ ಮತ್ತು ಚಬಿಯಲ್ಲಿ 22 ಮಂದಿ ಮೃತಪಟ್ಟಿದ್ದಾರೆ. 2017ರಿಂದ ಒಂದೇ ದಿನದಲ್ಲಿ ದಾಳಿಯಿಂದ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.
ಸಮುದಾಯಗಳ ನಡುವಿನ ಘರ್ಷಣೆಯ ಕಾರಣಗಳಿಂದಲೂ ಈ ಪ್ರದೇಶಗಳಲ್ಲಿ ದಾಳಿ ನಡೆಯುತ್ತಿರುತ್ತವೆ.
ಮಕ್ಕಳು ಮತ್ತು ಕುಟುಂಬದ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಸಮುದಾಯದ ಮುಖಂಡರೊಬ್ಬರು ಹೇಳಿದ್ದಾರೆ.
'ಶವಗಳನ್ನು ಸಾಗಿಸಲು ಏಳು ಟ್ರಕ್‌ಗಳನ್ನು ತರಲಾಗಿತ್ತು. ಶವಗಳಿಗಾಗಿ ಇನ್ನೂ ಹುಡುಕಾಟ ನಡೆದಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ. ಗಾಯಗೊಂಡಿರುವ ಹಲವು ಮಂದಿ ಇನ್ನೂ ಪೊದೆಗಳಲ್ಲಿ ಅವಿತುಕೊಂಡಿದ್ದಾರೆ' ಎಂದು ಸ್ಥಳೀಯ ಸಂಸದ ಗ್ರೇಸಿಯನ್ ಐರಾಕನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.