ಬ್ರೌನ್ಸ್‌ವಿಲ್ಲೆ(ಅಮೆರಿಕ): ದಕ್ಷಿಣ ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆಯ ವಲಸೆ ಸಹಾಯ ಕೇಂದ್ರದ ಹೊರಗೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ಜನರ ಗುಂಪಿಗೆ ರಭಸವಾಗಿ ಕಾರು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಏಳು ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯನ್ನು ಸದ್ಯಕ್ಕೆ ಅಪಘಾತ ಎಂದು ಪರಿಗಣಿಸುತ್ತಿದ್ದೇವೆ ಎಂದು ಕಾನೂನು ಜಾರಿ ಅಧಿಕಾರಿಗಳು ಹೇಳಿದ್ದಾರೆ. ಕಾರು ಓಡಿಸುತ್ತಿದ್ದವರು ವೇಗವಾಗಿ ಕಾರು ನುಗ್ಗಿಸುವ ಮೊದಲು ಗುಂಪಿನ ಜೊತೆ ಮಾತಿನ ಚಕಮಕಿ ನಡೆುಿಸ ನಿಂದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಬ್ರೌನ್ಸ್‌ವಿಲ್ಲೆಯಲ್ಲಿ ಬೆಳಿಗ್ಗೆ 8:30ರ ಸುಮಾರಿಗೆ ಬೂದು ಬಣ್ಣದ ಸ್ಪೋರ್ಟ್ ಯುಟಿಲಿಟಿ ವಾಹನವು ಕೆಂಪು ದೀಪವನ್ನು ದಾಟಿ ಹಲವಾರು ಜನರ ಮೇಲೆ ಹರಿಯಿತು ಎಂದು ಸ್ಥಳೀಯ ಪೊಲೀಸ್ ವಕ್ತಾರ ಮಾರ್ಟಿನ್ ಸ್ಯಾಂಡೋವಲ್ ತಿಳಿಸಿದ್ದಾರೆ.
ಘಟನೆಯಲ್ಲಿ ಏಳು ಜನರು ಮೃತಪಟ್ಟು, ಸುಮಾರು 10 ಜನರು ಗಾಯಗೊಂಡಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಮಹಿಳೆಯೊಬ್ಬರು ಕಾರನ್ನು ಚಲಾಯಿಸುತ್ತಿದ್ದರು.ಪಕ್ಕಕ್ಕೆ ಸರಿಯಿರಿ ಎಂದು ಅವರು ನಮಗೆ ಜೋರು ಮಾಡಿದರು ಎಂದು ಘಟನೆಯಲ್ಲಿ ಕೈಗೆ ಪೆಟ್ಟಾಗಿರುವ ಪ್ರತ್ಯಕ್ಷದರ್ಶಿ ಲೂಯಿಸ್ ಹೆರೆರಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.