ಅಂಕಾರಾ: ಟರ್ಕಿಯ ಅಂಕಾರ ಬಳಿಯ ವಾಯುನೆಲೆ ಕೈಗಾರಿಕಾ ಕಂಪನಿಯ ಘಟಕದಲ್ಲಿ (ಟಿಎಐ) ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಭಯೋತ್ಪಾದಕರ ದಾಳಿಯಲ್ಲಿ ಸಾವು, ನೋವು ಸಂಭವಿಸಿದೆ ಎಂದು ವರದಿಯಾಗಿದೆ.
ಘಟನೆಯು ಅಂಕಾರದಿಂದ 40 ಕಿ.ಮೀ. ದೂರವಿರುವ ಕಹರ್ಮಾನ್‌ಕಜಾನ್‌ನಲ್ಲಿ ನಡೆದಿದೆ. ಕೆಲವರು ಘಟನೆಯ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ದಟ್ಟ ಹೊಗೆ ಆವರಿಸಿದ್ದು ಕಂಡುಬರುತ್ತದೆ.
ಇನ್ನೂ ಕೆಲ ವಿಡಿಯೊದಲ್ಲಿ, ಇಬ್ಬರು ಬಂದೂಕುದಾರಿಗಳು ದಾಳಿ ನಡೆಸುವ ದೃಶ್ಯವಿದೆ. ಸಂಜೆ 4ಕ್ಕೆ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.
'ಇಬ್ಬರು ಭಯೋತ್ಪಾದಕರನ್ನು ಸದೆಬಡಿಯಲಾಗಿದೆ’ ಎಂದು ಮೇಯರ್ ಅಲಿ ಯೆರ್ಲಿಕಾಯಾ ತಿಳಿಸಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ
ದಾಳಿ ನಡೆಸಿದವರ ಹಾಗೂ ಸಂಘಟನೆ ಯಾವುದು ಎಂಬ ಗುರುತು ಈವರೆಗೂ ಪತ್ತೆಯಾಗಿಲ್ಲ.
ಉಕ್ರೇನ್‌ನ ಹಿರಿಯ ಅಧಿಕಾರಿಗಳು ಸೇನಾ ಒಪ್ಪಂದದ ಭಾಗವಾಗಿ ಈ ಪ್ರದೇಶಕ್ಕೆ ಒಂದು ವಾರದ ಹಿಂದೆಯಷ್ಟೇ ಭೇಟಿ ನೀಡಿದ್ದರು.
ಡ್ರೋನ್‌ಗಳ ತಯಾರಿಕೆಯಲ್ಲಿ ಟರ್ಕಿಯ ಸೇನಾ ಕ್ಷೇತ್ರ ಹೆಚ್ಚು ಗುರುತಿಸಿಕೊಂಡಿದೆ. ದೇಶದ ರಫ್ತು ಆದಾಯದಲ್ಲಿ ಶೇ 80ರಷ್ಟು ಇದರಿಂದಲೇ ಬರುತ್ತಿದೆ. 2023ರಲ್ಲಿ 10.2 ಶತಕೋಟಿ ಡಾಲರ್ ವಹಿವಾಟು ನಡೆಸಿತ್ತು ಎಂದೆನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.