ADVERTISEMENT

ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್‌ಗೆ ಕೋವಿಡ್ ದೃಢ

ಏಜೆನ್ಸೀಸ್
Published 1 ಮಾರ್ಚ್ 2022, 16:13 IST
Last Updated 1 ಮಾರ್ಚ್ 2022, 16:13 IST
ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ (ಚಿತ್ರ-ಎಎಫ್‌ಪಿ)
ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ (ಚಿತ್ರ-ಎಎಫ್‌ಪಿ)   

ಕ್ಯಾನ್‌ಬೆರಾ: ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರಿಗೆ ಕೋವಿಡ್ ದೃಢಪಟ್ಟಿದ್ದು, ಪ್ರತ್ಯೇಕವಾಗಿದ್ದುಕೊಂಡೇ ತನ್ನ ಕಚೇರಿಯ ಕೆಲಸಗಳನ್ನು ನಿರ್ವಹಿಸುವುದಾಗಿ ಮಂಗಳವಾರ ತಿಳಿಸಿದ್ದಾರೆ.

'ನಾನು ಜ್ವರದಂತಹ ರೋಗಲಕ್ಷಣಗಳನ್ನು ಹೊಂದಿದ್ದೇನೆ ಮತ್ತು ಶೀಘ್ರವೇ ಚೇತರಿಸಿಕೊಳ್ಳುತ್ತೇನೆ' ಎಂದು ಮಾರಿಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಕ್ರೇನ್ ಮೇಲಿನ ಯುದ್ಧ ಮತ್ತು ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿನ ವಿನಾಶಕಾರಿ ಪ್ರವಾಹಕ್ಕೆ ಸಂಬಂಧಿಸಿದಂತೆ ಸರ್ಕಾರದ ಪ್ರತಿಕ್ರಿಯೆಗಳ ಮೇಲೆ ಗಮನಹರಿಸುವ ಮೂಲಕ ಪ್ರಧಾನಿಯಾಗಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಅವರು ಹೇಳಿದರು. ಸದ್ಯ ಅವರು, ತಮ್ಮ ಅಧಿಕೃತ ಸಿಡ್ನಿ ನಿವಾಸದಲ್ಲಿ ಪ್ರತ್ಯೇಕವಾಸದಲ್ಲಿದ್ದಾರೆ.

ADVERTISEMENT

ಮಾರಿಸನ್, ಮಂಗಳವಾರ ರಕ್ಷಣಾ ಸಚಿವ ಪೀಟರ್ ಡಟ್ಟನ್ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದರು. ಇದರಲ್ಲಿ ಸರ್ಕಾರವು ಉಕ್ರೇನ್‌ಗೆ ಕ್ಷಿಪಣಿಗಳು, ಮದ್ದುಗುಂಡುಗಳು ಮತ್ತು ಇತರ ಮಿಲಿಟರಿ ಯಂತ್ರಗಳಿಗೆ 50 ಮಿಲಿಯನ್ ಡಾಲರ್ ನೀಡುವ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.