ರಾಯಲ್ ಓಕ್: ಡೆಟ್ರಾಯಿಟ್ ನಗರದ ಮೃಗಾಲಯದಲ್ಲಿ 96 ವರ್ಷಗಳ ನಂತರ ಗೊರಿಲ್ಲಾವೊಂದು ಮರಿಗೆ ಜನ್ಮ ನೀಡಿದೆ.
‘ಬಂಡಿಯಾ’ ಚೊಚ್ಚಲ ಗರ್ಭ ಧರಿಸಿತ್ತು. ಮರಿಗೆ ಇನ್ನೂ ಹೆಸರಿಟ್ಟಿಲ್ಲ. ಈ ಮರಿಯೂ ಸೇರಿ ಮೃಗಾಲಯದಲ್ಲಿ ಒಟ್ಟು ಐದು ಗೊರಿಲ್ಲಾಗಳಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಸಾರ್ವಜನಿಕರು ಈಗಲೇ ಗೊರಿಲ್ಲಾಗಳನ್ನು ನೋಡಲು ಸಾಧ್ಯವಿಲ್ಲ. ತಾಯಿ ಮತ್ತು ಮರಿ ಒಂದಷ್ಟು ಸಮಯ ಒಟ್ಟಿಗೆ ಕಳೆದು ಅವುಗಳ ವಾಸಸ್ಥಾನಕ್ಕೆ ಹೊಂದಿಕೊಂಡ ನಂತರ ನೋಡಲು ಅವಕಾಶ ನೀಡಲಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.