ಇಸ್ಲಾಮಾಬಾದ್: ‘ಭಾರತ ಸರ್ಕಾರವು ಸ್ವಾರ್ಥ, ಅಜಾಗರುಕತೆ ಹಾಗೂ ಕಾಲ್ಪನಿಕ ಹಕ್ಕನ್ನು ಪ್ರತಿಪಾದಿಸಿದೆ. ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿರಿಸಿ ವಾಯುದಾಳಿಯನ್ನು ನಡೆಸಿದೆ. ಇದು ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆಗೆ ಅಪಾಯ’ ಎಂದು ಪಾಕಿಸ್ತಾನ ಆರೋಪಿಸಿದೆ.
ಪ್ರಧಾನಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಮಿತಿಯ ವಿಶೇಷ ಸಭೆಯಲ್ಲಿ ವಿದೇಶಾಂಗ, ರಕ್ಷಣೆ, ಹಣಕಾಸು ಇಲಾಖೆಗಳಸಚಿವರು ಹಾಗೂ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.ಭಾರತೀಯ ವಾಯುಪಡೆಯು ಪಾಕಿಸ್ತಾನದಲ್ಲಿರುವ ಜೈಷ್-ಎ-ಮೊಹಮ್ಮದ್ ಉಗ್ರರ ನೆಲೆಗಳ ಮೇಲೆ ನಡೆಸಿದ ದಾಳಿಯನ್ನು ಈ ವೇಳೆ ಖಂಡಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಮಂತ್ರಿ ಇಮ್ರಾನ್ ಖಾನ್, ‘ಅದು(ಭಾರತ) ಆಯ್ಕೆಮಾಡಿಕೊಂಡಿರುವ ಸಮಯ ಮತ್ತು ಸ್ಥಳದಲ್ಲಿಯೇ ಪ್ರತಿಕ್ರಿಯಿಸಬೇಕು. ಭಾರತವು ತನ್ನ ಬೇಜವಾಬ್ದಾರಿಯುತ ನೀತಿಯನ್ನು ಇದೀಗ ಬಹಿರಂಗಪಡಿಸಿದೆ’ ಎಂದಿದ್ದು, ‘ಸಂಭವನೀಯತೆಯನ್ನು ಎದುರಿಸಲು ಸಿದ್ಧವಾಗಿರಿ’ ಎಂದು ಪಾಕ್ ಸೇನೆ ಹಾಗೂ ಜನರಿಗೆ ಕರೆ ನೀಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮಹಮ್ಮೂದ್ ಖುರೇಷಿ, ಭಾರತವು ಉತ್ತಮ ರೀತಿಯಲ್ಲಿ ಮುಂದುವರಿಯಬೇಕು. ಆಕ್ರಮಣಕ್ಕೆ ಪ್ರತಿಯಾಗಿ ತಕ್ಕ ಪ್ರತಿಕ್ರಿಯೆ ನೀಡುವ ಹಕ್ಕು ಪಾಕಿಸ್ತಾನಕ್ಕೆ ಇದೆ ಎಂದು ಗುಡುಗಿದ್ದಾರೆ.
‘ನಾವು ಇದನ್ನು ಗಂಭೀರವಾದ ಆಕ್ರಮಣ ಎಂದು ಪರಿಗಣಿಸುತ್ತೇವೆ. ಇದು ಗಡಿ ನಿಯಂತ್ರಣ ರೇಖೆಯ ಉಲ್ಲಂಘನೆಯಾಗಿದೆ. ಪಾಕಿಸ್ತಾನವು ಸ್ವರಕ್ಷಣೆ ಹಾಗೂ ಆಕ್ರಮಣಕ್ಕೆ ಸರಿಯಾದ ರೀತಿಯ ಪ್ರತಿಕ್ರಿಯೆ ನೀಡುವ ಹಕ್ಕನ್ನು ಹೊಂದಿದೆ’ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಬಲಾಕೋಟ್‌ನಲ್ಲಿರುವ ಜೈಷ್–ಎ–ಮೊಹಮದ್ ಉಗ್ರ ಸಂಘಟನೆಯ ನೆಲೆಗಳನ್ನು ಗುರಿಯಾಗಿರಿಸಿದ್ದ ವಾಯುಪಡೆಯು ಮಂಗಳವಾರ ಬೆಳಗ್ಗಿನ ಜಾವ 3.45ಕ್ಕೆ ಅತ್ಯಂತ ಚುರುಕು ಮತ್ತು ನಿಖರ ದಾಳಿ ಸಂಘಟಿಸಿತ್ತು. ಈ ವೇಳೆ 350ಕ್ಕೂ ಹೆಚ್ಚು ಉಗ್ರರು ನಿರ್ನಾಮವಾಗಿದ್ದರು.
ಇನ್ನಷ್ಟು ಓದು
*ಬಲಾಕೋಟ್‍ನಲ್ಲಿ ವೈಮಾನಿಕ ದಾಳಿ ನಡೆಸಿ ಪಾಕ್‍ಗೆ ಪ್ರತ್ಯುತ್ತರ ನೀಡಿದ ಭಾರತ
*ವೈಮಾನಿಕ ದಾಳಿಯಲ್ಲಿ ಹತರಾಗಿದ್ದು 200 ಉಗ್ರರು!
*ಪಾಕ್ ವಿರುದ್ಧ ವೈಮಾನಿಕ ದಾಳಿ ನಡೆಸಿದ ಐಎಎಫ್‍ಗೆ ಟ್ವೀಟ್ ಪ್ರಶಂಸೆ
*ಪಾಕ್ ಉಗ್ರರ ನೆಲೆಗಳ ಮೇಲೆ ದಾಳಿ: ಸೀಬರ್ಡ್ ನೌಕಾನೆಲೆಯಲ್ಲಿ ಭದ್ರತೆ ಹೆಚ್ಚಳ
*ಇಂದಿನ ದಾಳಿ ನವ ಭಾರತದ ಸಂಕಲ್ಪದ ಮುನ್ನುಡಿ: ಅಮಿತ್ ಶಾ
*ಪಾಕಿಸ್ತಾನ ಇನ್ನಾದರೂ ತೆಪ್ಪಗಿರಲಿ: ಪ್ರಹ್ಲಾದ ಜೋಶಿ
*ಮೋದಿ ನುಡಿದಂತೆ ನಡೆದಿದ್ದಾರೆ; ಇದು ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ -ಸದಾನಂದ ಗೌಡ
*ಉಗ್ರರ ಶಿಬಿರಗಳನ್ನೇ ಗುರಿಯಾಗಿರಿಸಿ ಕಾರ್ಯಾಚರಣೆ ಮಾಡಲಾಗಿದೆ: ವಿಜಯ್ ಗೋಖಲೆ
*ಪುಲ್ವಾಮಾ ದಾಳಿಗೆ ಪ್ರತೀಕಾರ: ಉಗ್ರರ ವಿರುದ್ಧ ಭಾರತ ‘ಯುದ್ಧ’
*ನಮ್ಮ ಸರ್ಕಾರ ಬಳಸುತ್ತಿರುವ ‘ನಾನ್–ಮಿಲಿಟರಿ ಆಕ್ಷನ್’ ಪದಗಳ ಅರ್ಥವೇನು
*ಸಾರ್ವತ್ರಿಕ ಚುನಾವಣೆ ಗಮನದಲ್ಲಿರಿಸಿ ವಾಯುದಾಳಿ ನಡೆಸಿದ ಭಾರತ: ಪಾಕಿಸ್ತಾನ ಆರೋಪ
*ವಾಯುದಾಳಿ: ಮುಂಬೈ ಕಟ್ಟೆಚ್ಚರ, ಬಿಗಿ ಭದ್ರತೆ ಕೈಗೊಳ್ಳುವಂತೆ ಶಾಲೆಗಳಿಗೆ ಸೂಚನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.