ADVERTISEMENT

ಬೆಂಕಿ ದುರಂತ; ಕಟ್ಟಡ ಮಾಲೀಕರ ಬಂಧನ

ರಾಯಿಟರ್ಸ್
Published 1 ಏಪ್ರಿಲ್ 2019, 0:19 IST
Last Updated 1 ಏಪ್ರಿಲ್ 2019, 0:19 IST

ಢಾಕಾ: ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ 26 ಜನ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿ ಕಟ್ಟಡದ ಇಬ್ಬರು ಮಾಲೀಕರಾದ ಎಸ್‌.ಎಂ.ಎಚ್‌.ಐ. ಫಾರೂಖ್‌ ಮತ್ತು ತಸ್ವಿರುಲ್‌ ಇಸ್ಲಾಂ ಅವರನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಕಳೆದ ವಾರ ಇಲ್ಲಿನ 22 ಮಹಡಿಗಳ ಕಟ್ಟಡದಲ್ಲಿ ಬೆಂಕಿ ದುರಂತ ಸಂಭವಿಸಿತ್ತು. ಘಟನೆಯಲ್ಲಿ 70 ಜನ ಗಾಯಗೊಂಡಿದ್ದರು. ಕಟ್ಟಡದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದಿರುವುದು ಮತ್ತು ಅಕ್ರಮವಾಗಿ ಕಟ್ಟಡ ವಿಸ್ತರಿಸಿರುವುದು, ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಯಂತ್ರಣ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಆರೋಪ ಬಂಧಿತರ ಮೇಲಿದೆ.

ತಸ್ವಿರುಲ್‌ ಅವರು ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿಯ ಜಿಲ್ಲಾ ಮುಖಂಡ. 1990ರಲ್ಲಿ ಕಟ್ಟಡವನ್ನು ನಿರ್ಮಿಸಿದ ನಿರ್ಮಾಣ ಕಂಪನಿಯ ಮಾಲೀಕರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ADVERTISEMENT

22 ಅಗ್ನಿಶಾಮಕ ವಾಹನಗಳು ಹಾಗೂ ಹೆಲಿಕಾಪ್ಟರ್‌ಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.

ಸಮೀಪದ ನಗರದಲ್ಲೇ ಇಂಥದ್ದೇ ದುರಂತ ಸಂಭವಿಸಿ 71 ಜನರು ಬಲಿಯಾದ ಒಂದು ತಿಂಗಳ ಬಳಿಕ ಈ ದುರಂತ ಸಂಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.