ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ, ನ್ಯಾಷನಲ್ ಪಕ್ಷದ ಮುಖ್ಯಸ್ಥೆ ಖಲೀದಾ ಜಿಯಾ ಅವರ ಬ್ಯಾಂಕ್ ಖಾತೆಯನ್ನು 17 ವರ್ಷಗಳ ಬಳಿಕ ಆದಾಯ ಇಲಾಖೆ ಸಕ್ರಿಯಗೊಳಿಸಿದೆ.
‘ಖಲೀದಾ ಅವರಿಗೆ ಸಂಬಂಧಿಸಿದ ಯಾವುದೇ ತೆರಿಗೆ ಬಾಕಿ ಉಳಿದಿಲ್ಲ, ಹೀಗಾಗಿ ಅವರ ಬ್ಯಾಂಕ್ ಖ್ಯಾತೆಗಳನ್ನು ಸಕ್ರಿಯಗೊಳಿಸಲು ಆದೇಶಿಸಿದ್ದೇವೆ, ತಕ್ಷಣದಿಂದಲೇ ಖಲೀದಾ ಅವರ ಬ್ಯಾಂಕ್ ಖಾತೆಗಳು ಕಾರ್ಯನಿರ್ವಹಿಸಲಿವೆ’ ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ವರದಿಯಾಗಿದೆ
2007ರ ಆಗಸ್ಟ್‌ನಲ್ಲಿ, ರಾಷ್ಟ್ರೀಯ ಕಂದಾಯ ಮಂಡಳಿಯ ಕೇಂದ್ರ ಗುಪ್ತಚರ ಕೋಶವು ಖಲೀದಾ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿತ್ತು.
15 ವರ್ಷಗಳ ಕಾಲ ಬಾಂಗ್ಲಾದಲ್ಲಿ ಪ್ರಧಾನಿಯಾಗಿ ಆಡಳಿತ ನಡೆಸಿದ್ದ ಶೇಖ್ ಹಸೀನಾ, ಮೀಸಲಾತಿ ದಂಗೆಯಿಂದಾಗಿ ಹುದ್ದೆ ತೊರೆದು ದೇಶ ಬಿಟ್ಟ ಬಳಿಕ, ನೊಬೆಲ್ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚಿಸಲಾಗಿದೆ. ಈ ನಡುವೆ ಜೈಲಿನಲ್ಲಿದ್ದ ಖಲೀದಾ ಜಿಯಾ ಅವರ ಬಿಡುಗಡೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.