ADVERTISEMENT

ಬಹಿಷ್ಕಾರದ ನಡುವೆಯೇ ಬಾಂಗ್ಲಾದೇಶದಲ್ಲಿ ಇಂದು ಸಾರ್ವತ್ರಿಕ ಚುನಾವಣೆ: ಬಿಗಿ ಭದ್ರತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜನವರಿ 2024, 2:27 IST
Last Updated 7 ಜನವರಿ 2024, 2:27 IST
<div class="paragraphs"><p>ಬಾಂಗ್ಲಾದೇಶದಲ್ಲಿ&nbsp;ಸಾರ್ವತ್ರಿಕ ಚುನಾವಣೆ</p></div>

ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ

   

(ಚಿತ್ರ ಕೃಪೆ–ಎಎನ್‌ಐ)

ಢಾಕಾ: ಮಾಜಿ ಪ್ರಧಾನಿ ಖಲೀದಾ ಜಿಯಾ ನೇತೃತ್ವದ ಪ್ರಮುಖ ಪ್ರತಿಪಕ್ಷ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮತದಾನ ಬಹಿಷ್ಕಾರದ ನಡುವೆಯೇ ಭಾನುವಾರ 12ನೇ ಸಾರ್ವತ್ರಿಕ ಚುನಾವಣೆಯ ನಡೆಯಲಿದೆ.

ADVERTISEMENT

299 ಸಂಸದರನ್ನು ಆಯ್ಕೆ ಮಾಡಲು ದೇಶದ ಸುಮಾರು 11.96 ಕೋಟಿ ನೋಂದಾಯಿತು ಮತದಾರರು ಮತ ಚಲಾಯಿಸಲಿದ್ದಾರೆ. ಚುನಾವಣೆಗಾಗಿ 42 ಸಾವಿರಕ್ಕೂ ಅಧಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ದೇಶದ ಚುನಾವಣಾ ಆಯೋಗ ವರದಿ ಮಾಡಿದೆ.

ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಜನವರಿ 8ರ ಮುಂಜಾನೆ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಸರ್ಕಾರದ ಕಾನೂನುಬಾಹಿರ ನೀತಿಗಳ ವಿರುದ್ಧ ಶನಿವಾರ 48 ಗಂಟೆಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಆರಂಭಿಸಿದ ಪ್ರತಿಪಕ್ಷ ಬಿಎನ್‌ಪಿ ಚುನಾವಣೆಯನ್ನು ಬಹಿಷ್ಕರಿಸಿದೆ. ಇದರಿಂದ ಪ್ರಧಾನಿ ಹಸೀನಾ ಸತತ ನಾಲ್ಕನೇ ಬಾರಿ ಗೆಲ್ಲುವ ನಿರೀಕ್ಷೆಯಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

14 ಮತಗಟ್ಟೆ ಕೇಂದ್ರಗಳು, 2 ಶಾಲೆಗಳಿಗೆ ಬೆಂಕಿ:

ಸಾರ್ವತ್ರಿಕ ಚುನಾವಣೆಗೂ ಮೊದಲು ದೇಶದ 10 ಜಿಲ್ಲೆಗಳಲ್ಲಿ ಕನಿಷ್ಠ 14 ಮತದಾನ ಕೇಂದ್ರಗಳು ಮತ್ತು ಎರಡು ಶಾಲೆಗಳಿಗೆ ಶುಕ್ರವಾರ ಹಾಗೂ ಶನಿವಾರ ಬೆಂಕಿ ಹಚ್ಚಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.

ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ಘಟನೆಯಲ್ತಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.