ADVERTISEMENT

ಬೆದರಿಕೆ ಆರೋಪ: ನ್ಯಾಟೊ ನಾಯಕರ ವಿರುದ್ಧ ಚೀನಾ ಕಿಡಿ

‘ಚೀನಾದ ಅಭಿವೃದ್ಧಿಗಳನ್ನು ತರ್ಕ ಬದ್ಧವಾಗಿ ನೋಡಬೇಕು’

ಏಜೆನ್ಸೀಸ್
Published 15 ಜೂನ್ 2021, 8:43 IST
Last Updated 15 ಜೂನ್ 2021, 8:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್‌: ‘ನ್ಯಾಟೊ ಮೈತ್ರಿಕೂಟವು ಚೀನಾದ ನೀತಿಗಳಿಂದ ಬೆದರಿಕೆ ಇದೆ ಎಂದು ವೈಭವೀಕರಿಸಿ ಹೇಳುತ್ತಿದೆ. ಈ ಮೂಲಕ ಸಂಘರ್ಷಕ್ಕಿಳಿಯುಲು ಪ್ರಯತ್ನಿಸುತ್ತಿದೆ’ ಎಂದು ಚೀನಾ ಮಂಗಳವಾರ ದೂರಿದೆ.

‘ಚೀನಾದ ನೀತಿಗಳಿಂದ ಸೃಷ್ಟಿಯಾಗಿರುವ ಬೆದರಿಕೆಗಳನ್ನು ಒಟ್ಟಾಗಿ ಎದುರಿಸುತ್ತೇವೆ. ಚೀನಾವುಪರಮಾಣು ಶಸ್ತ್ರಾಗಾರ ನಿರ್ಮಿಸುತ್ತಿದೆ. ಬಾಹ್ಯಾಕಾಶ ಮತ್ತು ಸೈಬರ್‌ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಇದು ಅಂತರರಾಷ್ಟ್ರೀಯ ಸಮುದಾಯಕ್ಕೆ ಬೆದರಿಕೆ ಸೃಷ್ಟಿಸಿದೆ’ ಎಂದು ಸೋಮವಾರ ನ್ಯಾಟೊ ನಾಯಕರು ಹೇಳಿದ್ದರು.

ಇದಕ್ಕೆ ಆಕ್ಷೇ‍ಪ ವ್ತಕ್ತಪಡಿಸಿರುವ ಚೀನಾ, ‘ದೇಶದ ಅಭಿವೃದ್ಧಿಯನ್ನು ತರ್ಕ ಬದ್ಧವಾಗಿ ನೋಡಬೇಕು. ಅದನ್ನು ಚೀನಾದ ಬೆದರಿಕೆ ನೀತಿಗಳು ಎಂದು ಉತ್ಪ್ರೇಕ್ಷಿಸುವುದನ್ನು ನಿಲ್ಲಿಸಿ. ರಾಜಕೀಯ ಹಗೆ ಮತ್ತು ಸಂಘರ್ಷ ಸೃಷ್ಟಿಸಲು ಚೀನಾದ ನ್ಯಾಯಸಮ್ಮತ ಹಿತಾಸಕ್ತಿ ಮತ್ತು ಹಕ್ಕುಗಳನ್ನು ಬಳಸಬೇಡಿ’ ಎಂದಿದೆ.

ADVERTISEMENT

‘ಚೀನಾದ ಶಾಂತಿಯುತ ಅಭಿವೃದ್ಧಿಯನ್ನು ಹಾಳುಗೆಡವಲು ಪ್ರಯತ್ನಿಸಬೇಡಿ. ಅಂತರರಾಷ್ಟ್ರೀಯ ಪರಿಸ್ಥಿತಿಯನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಇದು ಶೀತಲ ಸಮರದ ಮುಂದುವರಿಕೆಯಂತೆ ಭಾಸವಾಗುತ್ತಿದೆ’ ಎಂದು ಚೀನಾ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.