ಬೀಜಿಂಗ್: ತೈವಾನ್‌ನಲ್ಲಿ ಸೋಮವಾರದಿಂದ ನಡೆಯಲಿರುವ ಚೀನಾ ವಿರುದ್ಧದ ಅಂತರ ಸಂಸದೀಯ ಮೈತ್ರಿಕೂಟದ ಶೃಂಗಸಭೆಯಲ್ಲಿ ಭಾಗವಹಿಸದಂತೆ ಚೀನಾ ಸರ್ಕಾರವು ಆರು ದೇಶಗಳ ನಾಯಕರ ಮೇಲೆ ಒತ್ತಡ ಹೇರುತ್ತಿದೆ ಎಂದು ಆ ದೇಶಗಳ ನಾಯಕರು ಆರೋಪಿಸಿದ್ದಾರೆ.
ಬೊಲಿವಿಯಾ, ಕೊಲಂಬಿಯಾ, ಸ್ಲೊವಾಕಿಯಾ, ಉತ್ತರ ಮೆಸಡೋನಿಯಾ, ಬೊಸ್ನಿಯಾ ಮತ್ತು ಹತ್ಸಗೊವೀನಾ ಹಾಗೂ ಕೆಲವು ಏಷ್ಯಾ ಖಂಡದ ದೇಶಗಳ ನಾಯಕರು ಚೀನಾ ವಿರುದ್ಧ ಆರೋಪ ಮಾಡಿದ್ದಾರೆ. ಶೃಂಗಸಭೆಯಲ್ಲಿ ಭಾಗವಹಿಸದಂತೆ ಸಂದೇಶಳು, ಇ–ಮೇಲ್ ಹಾಗೂ ಕರೆಗಳು ಬರುತ್ತಿವೆ ಎಂದು ದೂರಿದ್ದಾರೆ. ಮೈತ್ರಿಕೂಟದಲ್ಲಿ ಸುಮಾರು 35 ದೇಶಗಳಿವೆ. ಭಾರತವೂ ಈ ಮೈತ್ರಿಕೂಟದ ಭಾಗವಾಗಿದೆ.
ವಿವಿಧ ದೇಶಗಳ ನಾಯಕರು ಸೇರಿಕೊಂಡು ರೂಪಿಸಿರುವ ಮೈತ್ರಿಕೂಟ ಇದಾಗಿದೆ. ಚೀನಾದ ಶಕ್ತಿ ಹೆಚ್ಚಿದಂತೆ, ಆ ದೇಶವು ಇತರೆ ದೇಶಗಳಿಗೆ ಒಡ್ಡುವ ಮಾನವ ಹಕ್ಕು ವಿರೋಧಿ ಬೆದರಿಕೆಯನ್ನು ತಡೆಯಲು ಈ ಮೈತ್ರಿಕೂಟವನ್ನು ಹುಟ್ಟುಹಾಕಲಾಗಿದೆ. ಈ ಕೂಟವು ಪ್ರಜಾಪ್ರಭುತ್ವವನ್ನು ಪ್ರತಿಪಾದಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.