ADVERTISEMENT

ಗಾಜಾದಂತಹ ವಿನಾಶಕಾರಿ ಸ್ಥಿತಿ ಎದುರಾಗಲಿದೆ: ಲೆಬನಾನಿಗೆ ನೆತನ್ಯಾಹು ಎಚ್ಚರಿಕೆ

ಏಜೆನ್ಸೀಸ್
Published 9 ಅಕ್ಟೋಬರ್ 2024, 2:26 IST
Last Updated 9 ಅಕ್ಟೋಬರ್ 2024, 2:26 IST
<div class="paragraphs"><p>ಬೆಂಜಮಿನ್‌ ನೆತನ್ಯಾಹು</p></div>

ಬೆಂಜಮಿನ್‌ ನೆತನ್ಯಾಹು

   

(ರಾಯಿಟರ್ಸ್ ಚಿತ್ರ)

ಜೆರುಸಲೇಂ: 'ಲೆಬನಾನಿನಲ್ಲಿ ಗಾಜಾದಂತಹ ವಿನಾಶಕಾರಿ ಪರಿಸ್ಥಿತಿ ಎದುರಾಗಲಿದೆ' ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಎಚ್ಚರಿಸಿದ್ದಾರೆ.

ADVERTISEMENT

ಲೆಬನಾನ್‌ ಕರಾವಳಿಯ ದಕ್ಷಿಣ ಭಾಗದಲ್ಲಿ ಹಿಜ್ಬುಲ್ಲಾದ ವಿರುದ್ಧ ಭೂ ಕಾರ್ಯಾಚರಣೆಯನ್ನು ಇಸ್ರೇಲ್ ತೀವ್ರಗೊಳಿಸಿದೆ. ಪ್ರದೇಶದಲ್ಲಿ ಹೆಚ್ಚಿನ ಸೇನೆಯನ್ನು ನಿಯೋಜಿಸಿರುವ ಇಸ್ರೇಲ್, ನಾಗರಿಕರು ಸ್ಥಳಾಂತರ ಮಾಡುವಂತೆ ಕರೆ ನೀಡಿದೆ.

'ಗಾಜಾದಂತಹ ವಿನಾಶಕಾರಿ ಸ್ಥಿತಿ ಎದುರಾಗುವ ಮುನ್ನ ನಿಮಗೆ ಲೆಬನಾನ್ ಅನ್ನು ಉಳಿಸುವ ಅವಕಾಶವಿದೆ. ಯುದ್ಧವನ್ನು ಕೊನೆಗೊಳಿಸಲು ನಿಮ್ಮ ದೇಶವನ್ನು ಹಿಜ್ಬುಲ್ಲಾದಿಂದ ಮುಕ್ತಗೊಳಿಸಿ ಎಂದು ಲೆಬನಾನಿನ ಜನರಿಗೆ ನೆತನ್ಯಾಹು ಕರೆ ನೀಡಿದ್ದಾರೆ.

'ಹಾಗೆ ಮಾಡದಿದ್ದರೆ ನಿಮ್ಮ ಜನನಿಬಿಡ ಪ್ರದೇಶಗಳಿಂದ ಇಸ್ರೇಲ್ ವಿರುದ್ಧ ಹೋರಾಡಲು ಹಿಜ್ಬುಲ್ಲಾ ಯತ್ನಿಸಲಿದೆ. ಇದು ಸುದೀರ್ಘ ಯುದ್ಧಕ್ಕೆ ಹೇತುವಾಗಲಿದೆ' ಎಂದು ಎಚ್ಚರಿಸಿದ್ದಾರೆ.

'ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಸೇರಿದಂತೆ ಸಾವಿರಾರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ನಸ್ರಲ್ಲಾ ಉತ್ತರಾಧಿಕಾರಿ, ಆತನ ಉತ್ತರಾಧಿಕಾರಿಯನ್ನು ಹತ್ಯೆ ಮಾಡಲಾಗಿದೆ' ಎಂದು ಅವರು ಹೇಳಿದ್ದಾರೆ.

ಈ ಮೊದಲು ಇಸ್ರೇಲ್‌ನ ಬಂದರು ನಗರಿ ಹೈಫಾ ಗುರಿಯಾಗಿಸಿ ರಾಕೆಟ್ ದಾಳಿ ನಡೆಸಲಾಗಿದೆ ಎಂದು ಹಿಜ್ಬುಲ್ಲಾ ಸಂಘಟನೆ ಹೇಳಿದೆ. ಲೆಬನಾನಿನ ಜನನಿಬಿಡ ಪ್ರದೇಶಗಳ ಮೇಲೆ ದಾಳಿ ಮುಂದುವರಿದರೆ ಇಸ್ರೇಲ್ ನಗರಗಳ ಮೇಲೆ ಮತ್ತಷ್ಟು ರಾಕೆಟ್ ದಾಳಿ ನಡೆಸುವುದಾಗಿಯೂ ಎಚ್ಚರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.