ಬರ್ಲಿನ್: ಜರ್ಮನಿ ರಾಜಧಾನಿ ಬರ್ಲಿನ್ ನಗರದ ಈಜುಕೊಳಗಳಲ್ಲಿ ಪುರುಷರಂತೆ ಮಹಿಳೆಯರು ಕೂಡ ಟಾಪ್‌ಲೆಸ್ ಆಗಿ ಸ್ನಾನ ಮಾಡಬಹುದು ಎಂದು ನಿಯಮ ಹೊರಡಿಸಿದೆ.
ಈಜುಕೊಳವೊಂದರಲ್ಲಿ ಟಾಪ್‌ಲೆಸ್ ಆಗಿ ಸ್ನಾನ ಮಾಡಲು ಅವಕಾಶ ನಿರಾಕರಿಸಿದ್ದರಿಂದ ಮಹಿಳೆಯೊಬ್ಬರು ದೂರು ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಮಹಿಳೆಯರು ಕೂಡ ಮೇಲ್ವಸ್ತ್ರ ಧರಿಸದೇ ಸ್ನಾನ ಮಾಡಬಹುದು ಎಂದು ಆದೇಶ ಹೊರಡಿಸಲಾಗಿದೆ.
ಈಜುಕೊಳಗಳಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನತೆ ಕಲ್ಪಿಸಬೇಕು. ಅವರಂತೆ ಮಹಿಳೆಯರಿಗೂ ಕೂಡ ಮೇಲ್ವಸ್ತ್ರ ಇಲ್ಲದೇ ಸ್ನಾನ ಮಾಡಲು ಅವಕಾಶ ನೀಡಬೇಕು ಎಂದು ತಮ್ಮ ಗುರುತು ಬಹಿರಂಗ ಪಡಿಸಲು ಒಲ್ಲದ ಮಹಿಳೆಯರೊಬ್ಬರು ಸೆನೆಟ್‌ಗೆ ದೂರು ನೀಡಿದ್ದರು.
ನ್ಯಾಯ, ವೈವಿಧ್ಯತೆ ಹಾಗೂ ತಾರತಮ್ಯ ವಿರೋಧಿ ನಿಲುವಿನಿಂದಾಗಿ ಮಹಿಳೆಯರು ಕೂಡ ಪುರುಷರಂತೆ ಮೇಲ್ವಸ್ತ್ರ ಇಲ್ಲದೆಯೇ ಈಜುಕೊಳಗಲ್ಲಿ ಸ್ನಾನ ಮಾಡಬಹುದು ಎಂದು ಸೆನೆಟ್ ಆದೇಶ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.