ADVERTISEMENT

ಅಮೆರಿಕದ ದೀರ್ಘಾವಧಿ ವೀಸಾ: ಹೊಸ ಬದಲಾವಣೆಯಿಂದ ಭಾರತೀಯರಿಗೆ ಅನುಕೂಲ

ಪಿಟಿಐ
Published 16 ಫೆಬ್ರುವರಿ 2023, 3:31 IST
Last Updated 16 ಫೆಬ್ರುವರಿ 2023, 3:31 IST
   

ವಾಷಿಂಗ್ಟನ್‌: ದೀರ್ಘಕಾಲೀನ ವೀಸಾ ಹೊಂದಿರುವವರ, ಅಮೆರಿಕದ ಪೌರತ್ವ ಹೊಂದಿಲ್ಲದ ವಲಸಿಗರ ಮಕ್ಕಳ ವಯಸ್ಸನ್ನು ಲೆಕ್ಕಹಾಕಲು ನೆರವಾಗುವ ಉದ್ದೇಶದಿಂದ ಜೋ ಬೈಡನ್‌ ಅವರ ಆಡಳಿತವು ವೀಸಾ ನೀತಿಯಲ್ಲಿ ಕೆಲವು ಬದಲಾವಣೆ ಮಾಡಿದೆ. ಇದರ ಪ್ರಯೋಜನ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯರಿಗೆ ಲಭಿಸುವ ನಿರೀಕ್ಷೆ ಇದೆ.

ಮಕ್ಕಳ ಸ್ಥಿತಿ ಸಂರಕ್ಷಣಾ ಕಾಯ್ದೆ (ಸಿಎಸ್‌ಪಿಎ) ಅಡಿಯಲ್ಲಿ, ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ದೇಶದ ಪ್ರಜೆಗಳಲ್ಲದವರ ವಯಸ್ಸನ್ನು ಪರಿಗಣಿಸುವ ಸಲುವಾಗಿ ಖುದ್ದಾಗಿ ನವೀಕರಿಸುವ ವ್ಯವಸ್ಥೆಗೆ ಜೋ ಬೈಡನ್‌ ಆಡಳಿತವು ಅನುಮತಿಸಿದೆ.

ಹೆತ್ತವರೊಂದಿಗೆ ಕಾನೂನುಬದ್ಧವಾಗಿ ಅಮೆರಿಕಕ್ಕೆ ಬಂದರೂ ವಯಸ್ಸಿನ ಕಾರಣಕ್ಕೆ ಪೌರತ್ವ ಪಡೆಯಲಾಗದಿದ್ದ ಮಕ್ಕಳ ನೋವನ್ನು ಪರಿಹರಿಸುವಲ್ಲಿ ಇದು ಒಂದು ಸಣ್ಣ ಕ್ರಮವಾಗಿದೆ. ಆದರೂ, ಇದು ಮಹತ್ವದ ಹೆಜ್ಜೆ ಎನಿಸಿದೆ.

ADVERTISEMENT

ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳು (ಯುಎಸ್‌ಸಿಐಎಸ್‌) ದೀರ್ಘ ಕಾಲದ ಬೇಡಿಕೆಯನ್ನು ಪರಿಗಣಿಸಿ, ಈ ನೀತಿಯನ್ನು ಅಧಿಕೃತವಾಗಿ ಈ ಬದಲಾಯಿಸಿದೆ. ಇದರಿಂದ 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಇಂಪ್ರೂವ್‌ದಿಡ್ರೀಮ್‌.ಆರ್ಗ್‌ನ ದೀಪ್‌ ಪಟೆಲ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.