ವಾಷಿಂಗ್ಟನ್: ಅಂತರರಾಷ್ಟ್ರೀಯ ವ್ಯಾಪಾರ ವಿಚಾರದಲ್ಲಿ ಪ್ರಧಾನ ರಾಷ್ಟ್ರೀಯ ಸಲಹಾ ಸಮಿತಿಯಾಗಿರುವ ರಫ್ತು ಮಂಡಳಿಗೆ ಭಾರತ ಮೂಲದ ಉದ್ಯಮಿಗಳಾದ ಪುನೀತ್ ರೇಂಜೆನ್ ಮತ್ತು ರಾಜೇಶ್ ಸುಬ್ರಮಣ್ಯಂ ಅವರನ್ನು ನೇಮಕ ಮಾಡಿಕೊಳ್ಳಲು ಇಚ್ಛಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದಾರೆ.
‘ಮಂಡಳಿಗೆ ನೇಮಕ ಮಾಡಿಕೊಳ್ಳಲು ಬಯಸುವ ಸದಸ್ಯರ ಪಟ್ಟಿಯನ್ನು ಮಂಗಳವಾರ ಬೈಡನ್ ಘೋಷಿಸಿದ್ದಾರೆ. ಈ ಪಟ್ಟಿಯಲ್ಲಿ ರೇಂಜೆನ್ ಮತ್ತು ಸುಬ್ರಮಣ್ಯಂ ಅವರ ಹೆಸರಿದೆ’ ಎಂದು ಶ್ವೇತಭವನ ಹೇಳಿಕೆ ಬಿಡುಗಡೆ ಮಾಡಿದೆ.
ರೇಂಜೆನ್ ಅವರು ಡೆಲೊಯಟ್ ಕನ್ಸಲ್ಟಿಂಗ್ ಮಾಜಿ ಸಿಇಒ ಮತ್ತು ಸುಬ್ರಮಣ್ಯಂ ಅವರು ಫೆಡೆಕ್ಸ್ ಸಿಇಒ ಹಾಗೂ ಅಧ್ಯಕ್ಷರಾಗಿದ್ದಾರೆ.
ಎಕನಾಮಿಕ್ಸ್ ಟೈಮ್ಸ್ 2022ರಲ್ಲಿ ರೇಂಜೆನ್ ಅವರನ್ನು ‘ವರ್ಷದ ಜಾಗತಿಕ ಭಾರತೀಯ’ ಎಂದು ಗುರುತಿಸಿತ್ತು. 2023ರಲ್ಲಿ ಸುಬ್ರಮಣ್ಯಂ ಅವರು ‘ಪ್ರವಾಸಿ ಭಾರತೀಯ ಸಮ್ಮಾನ್’ ಪ್ರಶಸ್ತಿಗೆ ಭಾಜನರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.