ADVERTISEMENT

ಕೋವಿಡ್‌ ಮೂಲದ ಪತ್ತೆಗೆ ಬೈಡನ್‌ ಸೂಚನೆ

ಏಜೆನ್ಸೀಸ್
Published 26 ಮೇ 2021, 21:49 IST
Last Updated 26 ಮೇ 2021, 21:49 IST
ಜೋ ಬೈಡನ್
ಜೋ ಬೈಡನ್   

ವಾಷಿಂಗ್ಟನ್‌: ಕೋವಿಡ್‌–19 ಸಾಂಕ್ರಾಮಿಕ ಸೋಂಕಿತ ಪ್ರಾಣಿಯೊಂದಿಗಿನ ಮಾನವ ಸಂಪರ್ಕದಿಂದ ಅಥವಾ ಪ್ರಯೋಗಾಲಯದೊಳಗಿನ ಅವಘಡದಿಂದ ಹೊರಹೊಮ್ಮಿದೆಯೇ ಎಂದು ತೀರ್ಮಾನಿಸಲು ಸಾಕಷ್ಟು ಪುರಾವೆಗಳಿಲ್ಲ. ಆದ್ದರಿಂದ ಈ ಸೋಂಕಿನ ಮೂಲದ ಬಗ್ಗೆ ತನಿಖೆ ನಡೆಸಲು ಮತ್ತಷ್ಟು ಹೆಚ್ಚು ಪ್ರಯತ್ನ ಮಾಡಬೇಕು ಎಂದು ಅಧ್ಯಕ್ಷ ಜೋ ಬೈಡನ್‌ಅವರು ಅಮೆರಿಕದ ಗುಪ್ತಚರ ಇಲಾಖೆಗೆ ಬುಧವಾರ ಹೇಳಿದ್ದಾರೆ.

ಗುಪ್ತಚರ ಇಲಾಖೆಯ ಹೆಚ್ಚಿನವರು ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಕಷ್ಟು ಮಾಹಿತಿ ಇದೆ ಎಂಬುದನ್ನು ನಂಬುವುದಿಲ್ಲ. ಆದ್ದರಿಂದ ಸೂಕ್ತ ತನಿಖೆಯ ಅಗತ್ಯವಿದೆ. ಅಮೆರಿಕದ ರಾಷ್ಟ್ರೀಯ ಪ್ರಯೋಗಾಲಯಗಳು ಸಹ ತನಿಖೆಗೆ ಸಹಕಾರ ನೀಡಬೇಕು. ಕೋವಿಡ್‌ ಸಾಂಕ್ರಾಮಿಕದ ಮೂಲದ ಬಗ್ಗೆ ನಡೆಯುವ ಅಂತರರಾಷ್ಟ್ರೀಯ ತನಿಖೆಗಳಿಗೆ ಚೀನಾ ಸಹಕರಿಸಬೇಕು ಎಂದು ಅವರು ಹೇಳಿದ್ದಾರೆ.

ತೊಂಬತ್ತು ದಿನಗಳ ಒಳಗಾಗಿ ಗುಪ್ತಚರ ಇಲಾಖೆ ವರದಿ ನೀಡಬೇಕು ಎಂದೂ ಬೈಡನ್‌ ಸೂಚಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.