ವಾಷಿಂಗ್ಟನ್: ಮುಂದಿನ 24ರಿಂದ 36 ಗಂಟೆಗಳಲ್ಲಿ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ಉಗ್ರರು ಮತ್ತೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.
ಅಫ್ಗಾನಿಸ್ತಾನದಿಂದ ಇದೇ 31ರೊಳಗೆ ತನ್ನ ಪ್ರಜೆಗಳನ್ನು ಕರೆತರುವ ಕಾರ್ಯಕ್ಕೆ ಗಡುವು ಸಮೀಪಿಸುತ್ತಿರುವಂತೆಯೇ ಅಮೆರಿಕ ತೆರವು ಕಾರ್ಯಾಚರಣೆಯನ್ನು ಬಿರುಸುಗೊಳಿಸಿದೆ.
ದಾಳಿ ಬೆದರಿಕೆ ಇರುವ ಕಾರಣ ಅಮೆರಿಕ ಪ್ರಜೆಗಳು ವಿಮಾನನಿಲ್ದಾಣದ ಬಳಿ ಸುಳಿಯಬಾರದು ಎಂದು ವಿದೇಶಾಂಗ ಇಲಾಖೆ ಕೂಡ ಒತ್ತಾಯಿಸಿದೆ.
ಅಫ್ಗಾನಿಸ್ತಾನದಲ್ಲಿರುವ ಅಮೆರಿಕ ಪ್ರಜೆಗಳ ಸುರಕ್ಷತೆ ಕಾಯ್ದುಕೊಳ್ಳಲು ಅಗತ್ಯವಾದ ಆಡಳಿತ ವರ್ಗ, ಸಂಪನ್ಮೂಲಗಳು, ಯೋಜನೆಗಳು ಇವೆ ಎಂದೂ ಬೈಡನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.