ಕೆಂಟುಕಿ: ಅಮೆರಿಕದ ಸುಪ್ರೀಂ ಕೋರ್ಟ್ ಕಳೆದ ವಾರ ನೀಡಿದ್ದ ಗರ್ಭಪಾತ ನಿಷೇಧ ತೀರ್ಪು ಜಾರಿಗೊಳಿಸದಂತೆ ಕೆಂಟುಕಿಯ ನ್ಯಾಯಾಧೀಶರು ಗುರುವಾರ ಆದೇಶಿಸಿದ್ದಾರೆ.
ಗರ್ಭಪಾತ ನಿಷೇಧದ ಕಾನೂನನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಪ್ಲ್ಯಾನ್‌ಡ್ ಪೇರೆಂಟ್‌ಹುಡ್ ಅಂಗಸಂಸ್ಥೆ ಸೇರಿದಂತೆ ಎರಡು ಆಸ್ಪತ್ರೆಗಳ ಕೋರಿಕೆಯ ಮೇರೆಗೆಜೆಫರ್ಸನ್ ಸರ್ಕ್ಯೂಟ್ ನ್ಯಾಯಾಧೀಶ ಮಿಚ್ ಪೆರ್ರಿ ಅವರು ತಾತ್ಕಾಲಿಕ ತಡೆಯಾಜ್ಞೆ ನೀಡಿದರು.
ಬದಲಾವಣೆಗೆ ಬೈಡನ್ ಬದ್ಧ
ಮ್ಯಾಡ್ರಿಡ್ ವರದಿ: ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಕೊನೆಗೊಳಿಸಿರುವ ಸುಪ್ರೀಂ ಕೋರ್ಟ್‌ನ ನಿರ್ಧಾರವು ದೇಶವನ್ನು ಅಸ್ಥಿರಗೊಳಿಸುತ್ತಿದೆ. ರಾಷ್ಟ್ರವ್ಯಾಪಿ ಗರ್ಭಪಾತ ರಕ್ಷಣೆಗಳನ್ನು ಕ್ರೋಡೀಕರಿಸುವುದಕ್ಕಾಗಿ ಸೆನೆಟ್ ನಿಯಮಗಳ ಬದಲಾವಣೆಯನ್ನು ತಾವು ಬೆಂಬಲಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುರುವಾರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.