ADVERTISEMENT

ಮುಂದಿನ ವಾರದಿಂದ ಮತ್ತೆ ಪ್ರಚಾರದ ಕಣಕ್ಕೆ: ಜೋ ಬೈಡನ್

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 12:34 IST
Last Updated 20 ಜುಲೈ 2024, 12:34 IST
ಜೋ ಬೈಡನ್‌– ಎಎಫ್‌ಪಿ ಚಿತ್ರ
ಜೋ ಬೈಡನ್‌– ಎಎಫ್‌ಪಿ ಚಿತ್ರ   

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿರುವ ಜೋ ಬೈಡನ್‌ ಅವರು ಮುಂದಿನ ವಾರದಿಂದ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗಿಯಾಗುವೆ ಎಂದು ಘೋಷಿಸಿದ್ದಾರೆ. ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಡೆಮಾಕ್ರಟಿಕ್‌ ಸದಸ್ಯರೇ ಒತ್ತಾಯಿಸಿರುವ ಬೆನ್ನಲ್ಲೇ ಪ್ರತಿಸ್ಪರ್ಧಿ ಡೊನಾಲ್ಡ್‌ ಟ್ರಂಪ್‌ಗೆ ಪ್ರಬಲ ಸ್ಪರ್ಧೆಯೊಡ್ಡುವುದಾಗಿ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಬೈಡನ್‌ ಕೋವಿಡ್‌–19ಗೆ ತುತ್ತಾಗಿ ಡೆಲವೇರ್‌ನ ತಮ್ಮ ನಿವಾಸದಲ್ಲಿ ಪ್ರತ್ಯೇಕವಾಸದಲ್ಲಿದ್ದಾರೆ. ಒಂದು ವಾರ ಕಾಲ ವಿಶ್ರಾಂತಿ ಪಡೆಯುವ ನಿರೀಕ್ಷೆಯಿದೆ. 

‘ಡೊನಾಲ್ಡ್‌ ಟ್ರಂಪ್‌ ಅವರಿಂದ ಅಮೆರಿಕನ್ನರ ಪಾಲಿಗೆ ಭವಿಷ್ಯದಲ್ಲಿ ಕರಾಳ ದಿನಗಳು ಎದುರಾಗಬಹುದು. ಪಕ್ಷ ಹಾಗೂ ದೇಶದ ಎಲ್ಲ ನಿವಾಸಿಗಳು ಒಟ್ಟಾಗಿ ಅವರನ್ನು ಸೋಲಿಸಬಹುದು’ ಎಂದು ಶುಕ್ರವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಮಿಲ್ವಾಕೀಯಲ್ಲಿ ನಡೆದ ರಿಪಬ್ಲಿಕನ್‌ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಪಕ್ಷದ ಅಧ್ಯಕೀಯ ಅಭ್ಯರ್ಥಿಯಾಗಿ 78 ವರ್ಷದ ಡೊನಾಲ್ಡ್‌ ಟ್ರಂಪ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇದಾದ ಮರುದಿನವೇ ಬೈಡನ್‌ ಈ ಹೇಳಿಕೆ ನೀಡಿದ್ದಾರೆ.

‘ಮುಂದಿನ ವಾರದಿಂದ ಪ್ರಚಾರಕ್ಕೆ ಇಳಿಯುವುದನ್ನು ಎದುರು ನೋಡುತ್ತಿದ್ದೇನೆ. ಡೊನಾಲ್ಡ್‌ ಟ್ರಂಪ್‌ ಪ್ರಾಜೆಕ್ಟ್‌– 2025ರ ಅಜೆಂಡಾಗಳನ್ನು ಬಯಲು ಮಾಡುತ್ತೇನೆ. ಅಮೆರಿಕನ್ನರಿಗಾಗಿ ನಾನು ಮಾಡಿದ ಕೆಲಸಗಳು ಹಾಗೂ ಭವಿಷ್ಯದ ಯೋಜನೆಗಳನ್ನು ನಿಮಗೆ ತಿಳಿಸಲಿದ್ದೇನೆ. ನಾವು ನಮ್ಮ ಪ್ರಜಾಪ್ರಭುತ್ವ ಉಳಿಸುವ, ನಮ್ಮ ಹಕ್ಕುಗಳ ರಕ್ಷಣೆ, ಸ್ವಾತಂತ್ರ್ಯ, ಎಲ್ಲರಿಗೂ ಮುಕ್ತ ಅವಕಾಶಗಳನ್ನು ಸೃಷ್ಟಿಸುತ್ತೇವೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.